This is the title of the web page
This is the title of the web page

Please assign a menu to the primary menu location under menu

Local News

ವೀರಯೋಧ ಕ್ಯಾಪ್ಟನ್ ರಾಮಪ್ಪ ಕೊಳ್ಳಿಯವರಿಗೆ ಹಿರೇಕುಂಬಿಯಲ್ಲಿ ಭವ್ಯ ಸ್ವಾಗತ


ಬೆಳಗಾವಿ ಏ.೦೪: ೧೯೯೨ ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ, ೧೯೯೯ ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಅನೇಕ ಸೈನಿಕ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತೀಯ ಸೇನೆಯಲ್ಲಿ ಅಮೋಘ ೩೦ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ಬಂದ ಕ್ಯಾಪ್ಟನ್ ರಾಮಪ್ಪ ಕೊಳ್ಳಿ ಅವರಿಗೆ ಸ್ವಗ್ರಾಮ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮಸ್ಥರು ಮತ್ತು ಸ್ಥಳೀಯ ಶಾಸಕ,ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮತ್ತಿತರ ಗಣ್ಯರು ಪ್ರೀತಿ ಹಾಗೂ ಗೌರವದ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರವಿವಾರ ಏ.೩ ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಶಿಕ್ಷಕರು,ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ನಿವೃತ್ತ ಸೇನಾಧಿಕಾರಿಗೆ ಗೌರವ ರಕ್ಷೆ ಸಲ್ಲಿಸಿದರು.ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ರಾಮಪ್ಪ ಬಿ.ಕೊಳ್ಳಿಯವರು ಹುಟ್ಟೂರು ಹಿರೇಕುಂಬಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಭಾರತೀಯ ಸೇನೆಗೆ ೧೯೯೨ ಮಾರ್ಚ್ ೨೮ ರಂದು ಸೇರಿ ೩೦ ವರ್ಷಗಳ ಕಾಲ ಸೇವೆಗೈದು ಇತ್ತೀಚೆಗೆ ೨೦೨೨ ರ ಮಾರ್ಚ್ ೩೧ ರಂದು ನಿವೃತ್ತರಾದರು.
ವೀರಯೋಧರಾಗಿ ಪುಣೆ,ರಾಜಸ್ಥಾನ,ಡೆಹ್ರಾಡೂನ್ ,ಕಾರ್ಗಿಲ್ ಯುದ್ಧದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್ ವಲಯದಲ್ಲಿ ದೇಶಕ್ಕಾಗಿ ಹೋರಾಡಿದ್ದಾರೆ.೨೦೦೦-೨೦೧೦ ರವರೆಗೆ ಆಪರೇಷನ್ ಪರಾಕ್ರಮ, ಉತ್ತರ ಕಾಶ್ಮೀರದ ಅಮರನಾಥ ಸುರಕ್ಷತಾ ಕಾರ್ಯಾಚರಣೆ, ಸೋನಾಮಾರ್ಗ ಸುರಕ್ಷತೆ ಮತ್ತಿತರ ಪ್ರಮುಖ ಸೇವೆಗಳ ಸಂದರ್ಭದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಗೈದಿದ್ದಾರೆ.ಬೆಳಗಾವಿಯ ಇನ್‌ಫಂಟ್ರಿ ಕಮಾಂಡೋ ಶಾಲೆಯಲ್ಲಿಯೂ ಕ್ಯಾಪ್ಟನ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸುದೀರ್ಘ ೩೦ ವರ್ಷಗಳ ಕಾಲ ದೇಶಸೇವೆಗೈದ ಗ್ರಾಮದ ವೀರಪುತ್ರನಿಗೆ ಹಿರೇಕುಂಬಿ ಗ್ರಾಮಸ್ಥರು ಇಂದು ಏ.೩ ರಂದು ಹೆಮ್ಮೆಯಿಂದ ಸ್ವಾಗತಿಸಿ,ಗೌರವದಿಂದ ಬರಮಾಡಿಕೊಂಡರು.
ಗ್ರಾ.ಪಂ.ಅಧ್ಯಕ್ಷೆ ಫಕೀರವ್ವ ಪುಂಡಲೀಕ ಕೊಳ್ಳಿ,ಸದಸ್ಯರಾದ ಶೇಖಪ್ಪ ದೇಶನೂರ, ಗದಗಯ್ಯ ಅಮೋಘಿಮಠ,ತಾ.ಪಂ.ಮಾಜಿ ಸದಸ್ಯ ಸುರೇಶ ಹಾರೋಬೀಡಿ,ನಿವೃತ್ತ ಸೇನಾಧಿಕಾರಿ,ಶಿಕ್ಷಕ ರಮೇಶ ಪೂಜಾರಿ,ಮಾಜಿ ಸೈನಿಕರ ಸಮನ್ವಯ ಸಮಿತಿಯ ಮಲ್ಲಿಕಾರ್ಜುನ ಗಾಣಿಗೇರ ಸೇರಿದಂತೆ ಹಿರೇಕುಂಬಿ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.


Gadi Kannadiga

Leave a Reply