This is the title of the web page
This is the title of the web page

Please assign a menu to the primary menu location under menu

Local News

ಪಠ್ಯ ಪುಸ್ತಕ ಓದದೆ ವಿಮರ್ಶೆ ಏನು ಮಾಡ್ತೀರಿ,ಕೈ ನಾಯಕರಿಗೆ ಟಾಂಗ್ ಕೊಟ್ಟ ಕೋಟ ಶ್ರೀನಿವಾಸ ಪೂಜಾರಿ


ಅಥಣಿ: ಪಠ್ಯ ಪುಸ್ತಕ ಓದದೆ ನೀವೇನು ವಿಮರ್ಶೆ ಮಾಡ್ತೀರಿ ಎಂದು ಅಥಣಿಯಲ್ಲಿ ಕೈ ನಾಯಕರಿಗೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.

ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಪಠ್ಯ ಪುಸ್ತಕಗಳಲ್ಲಿ ಯಾವುದೇ ಗೊಂದಲಗಳಿಲ್ಲ  ಪಠ್ಯ ಪುಸ್ತಕ ಓದಿದ ನಂತರ ಎಲ್ಲ ಅರ್ಥವಾಗುತ್ತದೆ ಅಷ್ಟಕ್ಕೂ ಪಠ್ಯ ಪುಸ್ತಕ ರಾಷ್ಟ್ರ ಭಕ್ತರ ಸಮೂಹವನ್ನು ಸೃಷ್ಟಿ ಮಾಡುತ್ತದೆ ಎಂದು ರಾಜ್ಯದಲ್ಲಿ ಭುಗಿಲೆದ್ದಿರುವ ಪಠ್ಯ ಪುಸ್ತಕ ವಿವಾದವನ್ನು ಸಚಿವರು ಸಮರ್ಥನೆ ಮಾಡಿದರು.

ಅಲ್ಲದೆ  ಭಗತ್ ಸಿಂಗ್ ಸೇರಿದಂತೆ ಮಹಾನ್ ನಾಯಕರ ಜೀವನ ಚರಿತ್ರೆ ಕುರಿತು ಪಠ್ಯವನ್ನೂ ಸಹ ಅಳವಡಿಸಲಾಗಿದೆ. ಹೀಗಾಗಿ ಪಠ್ಯ ಪುಸ್ತಕಗಳಲ್ಲಿ ವಿವಿಧ ನಾಯಕರ ಬಗ್ಗೆ ಸೇರಿಕೆ ಕುರಿತು ಶಿಕ್ಷಣ ತಜ್ಞರು ಸಹ ಮಾತನಾಡಬೇಕು ಎಂದು ತಿಳಿಸಿದರು.

ಅಲ್ಲದೆ ಪಠ್ಯದಲ್ಲಿ ರಾಷ್ಟ್ರದ ಎಲ್ಲರ ಭಾವನೆಗಳನ್ನು ಗೌರವಿಸಬೇಕೆಂಬ ಆಶಯ ನಮ್ಮದಾಗಿದೆ ಎಂದ ಅವರು ಹೀಗಾಗಿ ಎಲ್ಲರೂ ರಾಷ್ಟ್ರೀಯತೆಗೆ ಒತ್ತು ಕೊಡಬೇಕಾಗುತ್ತದೆ.  ಅಲ್ಲದೆ ಹಿಜಾಬ್ ವಿಷಯದಲ್ಲಿ ಕೋರ್ಟ್ ನಿರ್ದೇಶನದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.


Gadi Kannadiga

Leave a Reply