This is the title of the web page
This is the title of the web page

Please assign a menu to the primary menu location under menu

State

ಲಾರಿಯ ಮೇಲೆ ಹತ್ತಿ ಜೋತಿ ಬಿದ್ದ ವಿದ್ಯುತ್ ತಂತಿ, ಕೇಬಲ್ ಸರಿಪಡಿಸಿದ ಲಾರಿ ಚಾಲಕ!!.ಪಾಲಿಕೆ,ಜೇಸ್ಕಂ ಕರ್ತವ್ಯ ಏನು??


ಕೆ.ಬಜಾರಪ್ಪ ವರದಿಗಾರರು
ಬಳ್ಳಾರಿ : ಗಣಿನಾಡು ಬಳ್ಳಾರಿ ನಗರದಲ್ಲಿ ಖಾಸಗಿ ಕೇಬಲ್ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಅಂಡರ್ ಗ್ರಾ÷್ಯಂಡ್ ಕೆಲಸ ಮುಗಿದ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯೆ ಕೇಬಲ್’ಗಳನ್ನು ನೇತು ಹಾಕಿರುವ ದೃಶ್ಯ ಕಂಡು ಬಂದಿದೆ. ಇದರಿಂದ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ.
ಬಳ್ಳಾರಿ ನಗರದ ತಾಳೂರು ರಸ್ತೆಯ ನೂತನ ನ್ಯಾಯಾಲಯದ ಮುಂದುಗಡೆ ಖಾಸಗಿ ಕೇಬಲ್’ಗಳು ನೇತಾಡುತ್ತಿದ್ದು, ನ್ಯಾಯಾಲಯದ ಸಂಕೀರ್ಣಕ್ಕೆ ಸಾಗಿಸುತ್ತುರುವ ಗ್ರಾವೇಲ್ ಲಾರಿಗೆ ಕೇಬಲ್ ಅಡ್ಡಲಾಗಿ ಜೋತು ಬಿದ್ದಿದೆ.
ಇದರಿಂದ ಲಾರಿಗಳು ಓಡಾಡಲು ತೊಂದರೆಯಾಗಿದೆ.ಇದನ್ನು ಗಮ£ಸಿದ ಲಾರಿಯ ಚಾಲಕ, ಲಾರಿಯ ಮೇಲೆ ಅಪಾಯವನ್ನು ಲೆಕ್ಕಿಸದೆ ಹತ್ತಿ ಕೇಬಲ್ ಹಾಗೂ ವಿದ್ಯುತ್ ತಂತಿಗಳು ಸರಿಪಡಿಸಿದ್ದಾನೆ.ಇದರಿಂದ ಜಿಲ್ಲಾಡಳಿತ, ಮಹಾನಗರ ಪಾಲಿಕೆ,ಜೇಸ್ಕಂ ಅಧಿಕಾರಿಗಳ ವಿರುದ್ಧ ಸಾರ್ವಜ£ಕರಿಂದ ಹಿಡಿಶಾಪ ಹಾಕಿದ್ದಾರೆ. ಅಪಾಯವನ್ನು ಲೆಕ್ಕಿಸದೆ ಈ ತರ ಲಾರಿಯ ಮೇಲೆ £ಂತಿ ಕೇಬಲ್ ಸರಿ ಪಡಿಸಿವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜ£ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆ.ಜೇಸ್ಕಂ ಖಾಸಗಿ ಕೇಬಲ್’ಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದ್ದು, ಈ ತರ ಘಟನೆಗಳು ಮರುಕಳಿಸದಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯ ಮಾಡಿದ್ದಾರೆ.
ಯಾವುದೇ ಖಾಸಗಿ ಕೇಬಲ್ ಗಳು ಹಾಕುವ ಸಂದರ್ಭದಲ್ಲಿ ಪಾಲಿಕೆ ಮತ್ತು ಜೇಸ್ಕಂ ಅಧಿಕಾರಿಗಳ ಅನುಮತಿ ಪಡೆಯಬೇಕು ಅಗಿದೆ.ವಿದ್ಯುತ್ ಕಂಬಗಳ ತುಂಬಾ ಕೇಬಲ್ ಗಳು ಇರುತ್ತವೆ.ಕೇಬಲ್ ಮಾಲಿಕರು ಕೇಲವುರಗೆ ಹಣವನ್ನು ಕೊಡುತ್ತಾರೆ ಏಂದು,ಹೇಳಲಾಗುತ್ತದೆ, ಯಾರಿಗೆ ಏಂದು ಸ್ಪಷ್ಟತೆ ಇಲ್ಲ.ಮುಂದೆ ನಡೆಯುವ ಅಪಾಯ ಗಳಗೆ ಪಾಲಿಕೆ, ಮತ್ತು ಜೇಸ್ಕಂ ಅಧಿಕಾರಿಗಳನ್ನು ಜವಾಬ್ದಾರಿ ಮಾಡಿ ಪ್ರಕರಣ ಗಳು ದಾಖಲೆ ಮಾಡಬೇಕು ಏಂದು ವಕೀಲರು ಅಭಿಪ್ರಾಯ ಪಟ್ಟಿದ್ದಾರೆ.


Leave a Reply