This is the title of the web page
This is the title of the web page

Please assign a menu to the primary menu location under menu

Local News

ಅವದಿ ಪೂರ್ವ ಚುನಾವಣೆ ಬಗ್ಗೆ ಕಟೀಲ್ ಹೇಳಿದ್ದೇನು?


ಬೆಳಗಾವಿ: ಬಿಜೆಪಿಯು ಪೂರ್ಣ ಅವದಿಯ ಆಡಳಿತವನ್ನು ಪೂರೈಸುತ್ತದೆ ಯಾವುದೇ ಕಾರಣಕ್ಕೂ ಮದ್ಯಂತರವಾಗಿ ಚುನಾವಣೆ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದ್ದಾರೆ.

ಗುರುವಾರ ಬೇಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು. ನಮಗೆ ಚುನಾವಣೆ ದಾವಂತ ಇಲ್ಲ ಅದ್ದರಿಂದ ಆಡಳಿತ ಅವದಿ ಪೂರ್ವ ಚುನಾವಣೆ ಮಾಡುವುದಿಲ್ಲ‌ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಸಿಎಂ ಆಗುವ ದಾವಂತ ಇದೆ. ಆದರೆ ಅವರಿಗೆ ರಾಜಕೀಯ ಸನ್ಯಾಸತ್ವ ಕೊಡಿಸುವ ಸವಾಲನ್ನ ರಮೇಶ್ ಜಾರಕಿಹೊಳಿ ಅವರು ತೆಗೆದುಕೊಂಡಿದ್ದಾರೆ ಎಂದರು.

ನಮ್ಮದು ಮತ್ತು ಬಾಲಚಂದ್ರ ಜಾರಕಿಹೊಳಿ , ರಮೇಶ ಜಾರಕಿಹೊಳಿ ಗುರಿ ಒಂದೇ ಇದೇ. ಮುಂದಿನ ಚುನಾವಣೆಯಲ್ಲಿ ಬೆಳಗಾವಿಯಲ್ಲಿ18 ಸ್ಥಾನ. ರಾಜ್ಯದಲ್ಲಿ 150 ಸ್ಥಾನ ಗೆಲುವು ಗುರಿಯಿದೆ ಎಂದರು. ರಮೇಶ ಜಾರಕಿಹೊಳಿ ಸಚಿವರು ಆಗ್ತಾರಾ ಎಂಬ ಪ್ರಶ್ನೆಗೆ, ಖಂಡಿತವಾಗಿಯೂ ರಮೇಶ ಜಾರಕಿಹೊಳಿ ಮಂತ್ರಿ ಆಗ್ತಾರೆ. ಯಾವಾಗ ಆಗ್ತಾರೆ ಅನ್ನೋದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು ಎಂದರು.

ಬಿಜೆಪಿಯಲ್ಲೂ ಸಿಎಂ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದೆಯೇ ಎಂಬ ಪ್ರಶ್ನೆಗೆ ಆಕಾಂಕ್ಷಿಗಳ ಪಟ್ಟಿ ಹೆಚ್ಚಾದಷ್ಟು ಖುಷಿ ಪಡಬೇಕು. ಪಕ್ಷ ಬಲಿಷ್ಟವಿದ್ದಷ್ಟು ಆಕಾಂಕ್ಷಿಗಳು ಸಂಖ್ಯೆ ಹೆಚ್ಚಾಗಿರುತ್ತದೆ ಅದೇ ಕಾರಣಕ್ಕೆ ನಮ್ಮಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ ಎಂದರು.


Gadi Kannadiga

Leave a Reply