ಕುಷ್ಟಗಿ :- ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಅನಗತ್ಯ ಕಿರುಕುಳ ನೀಡುವುದು ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರ ನಮ್ಮ ಹಕ್ಕನ್ನು ಕಿತ್ತುಕೊಂಡು ಬೇರೆ ಸಮುದಾಯಕ್ಕೆ ವರ್ಗಾಯಿಸುವ ಮೂಲಕ ಸಂವಿಧಾನ ಬದ್ಧವಾದ ಮೀಸಲಾತಿ ಕಿತ್ತುಕೊಂಡಿದೆ, ಎಂದು ತಾಲೂಕ ವೇಲ್ಪರ್ ಆಫ್ ಇಂಡಿಯಾ ಸಂಘಟನೆ ಕುಷ್ಟಗಿ ಪದಾಧಿಕಾರಿಗಳು, ಸರ್ಕಾರದ ಕ್ರಮವನ್ನು ತಡೆಹಿಡಿಯುವಂತೆ ಒತ್ತಾಯಿಸಿದ್ದಾರೆ.ಹಾಗೂ ಈ ಕೂಡಲೇ ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು, ಮತ ಬ್ಯಾಂಕಿಗಾಗಿ ಓಲೈಕೆ ರಾಜಕಾರಣ ಮಾಡಬಾರದು ಮುಸ್ಲಿಮರ 2ಬಿ ಮೀಸಲಾತಿ ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗಬೇಕೆಂದು ವೇಲ್ಪರ್ ಪಾರ್ಟಿ ಆಫ್ ಇಂಡಿಯಾ ಕುಷ್ಟಗಿ ತಾಲೂಕು ಘಟಕದ ವತಿಯಿಂದ ತಹಶಿಲ್ದಾರರ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದ್ದಾರೆ
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಹಸ್ಮುದ್ದೀನ್ ಅಲಂದಾರ್, ಸೈಯದ್ ಮೆಹಬೂಬ್ ,ರಾಜಾ ನಾಯಕ, ಮೈಬೂಸಾಬ ನೆರೆಬೆಂಚಿ, ಸೇರಿದಂತೆ ಸಂಘಟನೆಯ ಪಧಾದಿಕಾರಿಗಳು ಇತರರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ