This is the title of the web page
This is the title of the web page

Please assign a menu to the primary menu location under menu

Local News

ಸ್ತ್ರೀಯರಿಗೆ ಗೌರವ, ಮರ್ಯಾದೆ ಇರುವಲ್ಲಿ ದೇವತೆಗಳು ನೆಲೆಸಿರುತ್ತಾರೆ : ಠಕ್ಕಾಯಿ


ಯರಗಟ್ಟಿ: “ಜಗತ್ತಿನಲ್ಲಿ ಎಲ್ಲಿ ಸ್ತ್ರೀಯರಿಗೆ ಗೌರವ, ಮರ್ಯಾದೆಗಳು ಇರುವಲ್ಲಿ ದೇವತೆಗಳು ನೆಲೆಸಿರುತ್ತಾರೆ” ಎಂದು ಕನ್ನಡ ಸಾಹಿತ್ಯ ಪರಿಷತ್ತು, ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷ ಎನ್.ಆರ್. ಠಕ್ಕಾಯಿಯವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಯರಗಟ್ಟಿ ತಾಲೂಕು ಘಟಕದ ವತಿಯಿಂದ ಯರಗಟ್ಟಿಯ ದುರದುಂಡೇಶ್ವರ ಮಠದಲ್ಲಿ ಆಯೋಜಿಸಿದ ‘ಯರಗಟ್ಟಿ ತಾಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿನಂದನಾ ಹಾಗೂ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದ ಅವರು, ‘ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಸ್ತ್ರೀಯರಿಗೆ ಪೂಜ್ಯನೀಯ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಹೆಣ್ಣುಮಕ್ಕಳು ತಮಗೆ ದೊರೆತ ಗೌರವಕ್ಕೆ ಪ್ರತಿಯಾಗಿ ಸಮಾಜದಲ್ಲಿ ಮೌಲ್ಯ ಬಿತ್ತನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ’ ಎಂದು ಪ್ರತಿಪಾದಿಸಿದರು.
ಯರಗಟ್ಟಿ ತಾಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಗಣ್ಯರನ್ನು ಹಾಗೂ ತಾಲೂಕಿನ ವಿವಿಧ ಮಹಿಳಾ ಮಂಡಳಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮ ದಿವ್ಯಸಾನಿದ್ಯವನ್ನು ಗಂದಿಗವಾಡದ ಪೂಜ್ಯ ಮೃತ್ಯುಂಜಯಸ್ವಾಮಿಗಳು, ತಾಲೂಕು ಘಟಕದ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಎ. ಕೆ. ಜಮಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಮಹಾಂತೇಶ ಜಕಾತಿ, ಎ. ಎಮ್. ಹಾದಿಮನಿ, ಎಸ್. ಎಸ್. ಕುರುಬಗಟ್ಟಿಮಠ, ಮಹಾಂತೇಶ ಗೋಡಿ, ಆರ್. ಎಲ್. .ಜೂಗನವರ, ಶರಣೆ ಉಮಾತಾಯಿ ಪೂರ್ವಿಮಠ, ದೇವೆಂದ್ರ ಕಮ್ಮಾರ, ಎಂ. ಎಂ. ವಿರಕ್ತಮಠ, ಕುಮಾರ ಜಕಾತಿ, ರಾಜಶೇಖರ ಬಿರಾದಾರ, ಶ್ರೀಮತಿ ಪ್ರಭಾವತಿ ವಾಲಿ, ಶ್ರೀಮತಿ ಜ್ಯೋತಿ ದೇವರಡ್ಡಿ, ಶ್ರಿಮತಿ ಮಂಜುಳಾ ಕುಂಬಾರಗಿರಿಮಠ, ಶ್ರೀಮತಿ ಸೃಷ್ಠಿ ಪಟ್ಟಣಶೆಟ್ಟಿ ಸೇರಿದಂತೆ ಕ.ಸಾ.ಪ ಸರ್ವ ಸದಸ್ಯರು ಹಾಗೂ ತಾಲೂಕಿನ ಎಲ್ಲ ಮಹಿಳಾ ಮಂಡಳಗಳ ಪದಾದಿಕಾರಿಗಳು ಉಪಸ್ಥಿತರಿದ್ದರು.

 


Leave a Reply