This is the title of the web page
This is the title of the web page

Please assign a menu to the primary menu location under menu

Local News

ಕಸುಗುಡಿಸುವ ಮಹಿಳೆ ಮೇಲೆ ಕಾರು ಹರಿದು ಸ್ಥಳದಲ್ಲೆ ಸಾವು


ಬೆಳಗಾವಿ : ಕಸ ಗುಡಿಸುತ್ತಿದ್ದ ಮಹಿಳೆಗೆ ಕಾರು ಗುದ್ದಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ನಗರದ ಬಸವೇಶ್ವರ ವೃತ್ತದ ಬಳಿ ಇರುವ ಎಲ್ಲೈಸಿ ಕಚೇರಿ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಕಸ ಗುಡಿಸುತ್ತಿದ್ದ ಮಹಿಳೆಯ ಮೇಲೆ ಕಾರು ಹಾದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಿ.ಕೆ.ಕ್ವಾಟರ್ಸ್ ನ ಅನಿತಾ (52) ಮೃತದುರ್ದೈವಿಯಾಗಿದ್ದಾರೆ.

ಗುರುರಾಜ ಕುಲಕರ್ಣಿ ಎಂಬುವರು ಕಾರು ಹರಿಸಿದ್ದು. ಎಲ್ಲೈಸಿ ಕಚೇರಿ ಆವರಣದಿಂದ ಕಾರನ್ನು ಹೊರ ತೆಗೆಯುವಾಗ ಈ ಅವಘಡ ಸಂಭವಿಸಿದೆ.ದುರ್ಘಟನೆ ನಡೆಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿ ಗುರುರಾಜ ಕುಲಕರ್ಣಿ ಅವರನ್ನು ಥಳಿಸಿದ್ದಾರೆ.


Gadi Kannadiga

Leave a Reply