This is the title of the web page
This is the title of the web page

Please assign a menu to the primary menu location under menu

State

ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳ ವೈಟ್ ಕೋಟ್ ಸೆರಮನಿ ಸಮಾರಂಭ


ಗದಗ ಡಿಸೆಂಬರ್ ೧೪: ಜಿಮ್ಸ್ದಲ್ಲಿ ಮಂಗಳವಾರದಂದು ೨೦೨೨ ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ೧೫೦ ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳಿಗೆ ವೈಟ್‌ಕೋಟ್ ಸೆರಮನಿ ಸಮಾರಂಭಕ್ಕೆ ಆರತಿ ಬೆಳಗುವ ಮೂಲಕ ಸ್ವಾಗತಿಸಲಾಯಿತು.
ಖ್ಯಾತ ವೈದ್ಯರಾದ ಡಾ.ಸಿ.ಸೋಲೋಮನ್ ಸಮಾರಂಭ ಉದ್ಘಾಟಿಸಿದರು. ಡಾ.ಕುಶಾಲ ಗೋಡಖಿಂಡಿ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸಮಾಜಮುಖಿಯಾಗಿ ಬಡವ-ಶ್ರೀಮಂತ, ಜಾತಿಮತ ಎನ್ನುವ ಬೇಧವಿಲ್ಲದೇ ಪ್ರತಿ ರೋಗಿಯನ್ನು ಸಮಾನಾಂತರವಾಗಿ ಶುಶ್ರೂಷೆ ಮಾಡಬೇಕು. ವೈದ್ಯವೃತ್ತಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಅದನ್ನು ಕಾಯ್ದುಕೊಳ್ಳುವುದು ತಮ್ಮ ಕರ್ತವ್ಯವಾಗಿದೆ. ವೈದ್ಯ ವೃತ್ತಿಯಲ್ಲಿ ಸತತ ಪರಿಶ್ರಮ, ಕಲಿಕೆ ಹಾಗೂ ಗುಣಮಟ್ಟದ ಸೇವೆ ನೀಡಲು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.
ಸಂಸ್ಥೆಯ ನಿರ್ದೇಶಕರಾದ ಡಾ.ಬಸವರಾಜ ಬೊಮ್ಮನಹಳ್ಳಿ ಮಾತನಾಡಿ ವೈದ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲಾ ಒಂದು ಹಂತದಲ್ಲಿ ದೇವರ ಸ್ವರೂಪಿಯಾಗಿ ಕಾಣಿಸುತ್ತಾರೆ. ತಮ್ಮ ಬದುಕಿನಲ್ಲಿ ಬರವಸೆ ತುಂಬುವ, ಸಂತೋಷಕ್ಕೆ ಕಾರಣರಾಗುವ ವೈದ್ಯರು ನಮಗೆ ದೇವರ ಸಮಾನರಾಗಿರುತ್ತಾರೆ ಎಂದು ತಿಳಿಸಿದರು. ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ರಾಜು ಜಿಎಂ ಹಾಗೂ ವೈದ್ಯರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.


Gadi Kannadiga

Leave a Reply