This is the title of the web page
This is the title of the web page

Please assign a menu to the primary menu location under menu

Local News

ಚಳಿಗಾಲ ಅಧಿವೇಶನ-೨೦೨೨ ಸುವರ್ಣ ಸೌಧ, ಬೆಳಗಾವಿ ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ ಎಸ್.ಹೊರಟ್ಟಿ ಸರ್ವಾನುಮತದ ಆಯ್ಕೆ


ಬೆಳಗಾವಿ ಸುವರ್ಣಸೌಧ,ಡಿ.೨೧ ವಿಧಾನ ಪರಿಷತ್ ಸಭಾಪತಿಯಾಗಿ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗಂಡ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಸವರಾಜ ಎಸ್ ಹೊರಟ್ಟಿ ಸರ್ವಾನುಮತದಿಂದ ಆಯ್ಕೆಯಾದರು.
ಬುಧವಾರ ಬೆಳಗಾವಿ ಸುವರ್ಣ ಸೌಧದ ವಿಧಾನ ಪರಿಷತ್ ಕಲಾಪದಲ್ಲಿ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪೂರೆ ಸಭಾಪತಿ ಚುನಾವಣೆ ಕಾರ್ಯಕಲಾಪ ಆರಂಭಿಸಿದರು.
ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತನ ಡಾ. ವೈ.ಎ. ನಾರಾಯಣಸ್ವಾಮಿ, ಸದಸ್ಯರಾದ ಡಾ. ತೇಜಸ್ವಿನಿಗೌಡ, ಶಾಂತಾರಾಮ್ ಬುಡ್ನಿ ಸಿದ್ದಿ, ಅ.ದೇವೇಗೌಡ, ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕು ಎಂಬ ಪ್ರಸ್ತಾವವನ್ನು ಸೂಚಿಸಿದರು. ಸದಸ್ಯರಾದ ಆಯನೂರು ಮಂಜುನಾಥ್, ಆರ್ ಶಂಕರ್, ಎಸ್.ವಿ. ಸಂಕನೂರ ಅವರು ಪ್ರಸ್ತಾವವನ್ನು ಅನುಮೋದಿಸಿದರು.
ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪೂರೆ ಪ್ರಸ್ತಾವವನ್ನು ಮತವನ್ನು ಹಾಕಿದರು. ಮೊದಲ ಬಾರಿಗೆ ಪ್ರಸ್ತಾವನ್ನು ಸದನ ಸರ್ವಾನುಮತದಿಂದ ಅನುಮೋದಿಸಿತು. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜಾತ್ಯತಿತ ಜನತಾದಳ ಸದಸ್ಯರು ಸಹ ಮೇಜು ತಟ್ಟಿ ಬಸವರಾಜ ಎಸ್ ಹೊರಟ್ಟಿ ಆಯ್ಕೆಯನ್ನು ಸ್ವಾಗತಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ವಿಧಾನ ಪರಿಷತ್ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿರೋಧ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಜೆಡಿಎಸ್ ಪಕ್ಷದ ಸದಸ್ಯ ಎಸ್.ಎಲ್.ಭೋಜೇಗೌಡ ಸೇರಿದಂತೆ ಇತರೆ ಸದಸ್ಯರು ಸಭಾಪತಿಯಾಗಿ ಆಯ್ಕೆ ಆದ ಬಸವರಾಜ ಎಸ್ ಹೊರಟ್ಟಿ ಅವರನ್ನು ಸಭಾಪತಿ ಪೀಠಕ್ಕೆ ಕರೆ ತಂದರು. ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪೂರೆ ಅವರು ಬಸವರಾಜ ಹೊರಟ್ಟಿ ಅವರನ್ನು ಸ್ವಾಗತಿಸಿ ಸಭಾಪತಿ ಪೀಠದಲ್ಲಿ ಕೂರಿಸಿದರು.


Leave a Reply