ಬೆಳಗಾವಿ: ಮಹಿಳೆಯರು ಭಾರತದ ಹೈನೋದ್ಯಮ ಕ್ಷೇತ್ರದ ನಿಜವಾದ ನಾಯಕಿಯರು ಎಂದು ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ ಹೇಳಿದರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದಲ್ಲಿ ಸೋಮನಾಥನಗರದ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಮತ್ತು ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಹೈನುಗಾರಿಕೆ ಎಂಬುದು ಪ್ರತಿಯೊಂದು ಗ್ರಾಮಗಳಲ್ಲಿಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ನಿತ್ಯ ಆದಾಯ ಕೊಡುವ ಕಸುಬಾಗಿದೆ. ಇಂದು ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಮಹಿಳೆಯರು ಹೈನುಗಾರಿಕೆ ಮೂಲಕ ತಮ್ಮ ಬದುಕು ಕಟ್ಟಿಕೊಂಡು ತಮ್ಮ ಕುಟುಂಬ ಸಲುಹುತ್ತಿದ್ದಾರೆ,” ಎಂದು ಅವರು ಹೇಳಿದರು.
ಇದೇ ವೇಳೆ ಗ್ರಾಮದಲ್ಲಿ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಲಸಿಕಾ ಅಭಿಯಾನಕ್ಕೂ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸದೆ ಮಂಗಲಾ ಸುರೇಶ ಅಂಗಡಿ, ಸೋಮಪ್ಪ ಹದಗಲ್ಲ, ಸುರೇಶ ಕಂಬಿ, ಮೋಹನ ಅಂಗಡಿ, ಬಸವಣ್ಣೆಪ್ಪ ಪಗಾದ, ಯಲ್ಲಪ್ಪ ದೊಡವಾಡಿ, ನಾಗಪ್ಪ ಯಳ್ಳೂರ, ಗಂಗಾಧರ್ ಯಳ್ಳೂರ, ಕಲ್ಲಪ್ಪ ಸಂಪಗಾಂವಿ, ಸಂತೋಷ ಕಂಬಿ, ರಾಮನಗೌಡ ಪಾಟೀಲ, ಸುರೇಶ ಕುಡಿನಟ್ಟಿ ಕಾರ್ಯಕಾರಿ ಮಂಡಳಿಯ ಎಲ್ಲ ಸದಸ್ಯರು, ಹಮ್ಮಣ್ಣವರ ಸರ್, ಕೆ ಕೆ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಸರ್ವ ಸದ್ಯಸರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
Gadi Kannadiga > Local News > ಮಹಿಳೆಯರು ಭಾರತೀಯ ಹೈನೋದ್ಯಮದ ನಿಜ ನಾಯಕಿಯರು: ಲಕ್ಷಿ÷್ಮÃ ಹೆಬ್ಬಾಳಕರ