This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಮಹಿಳಾ ಸಮಾವೇಶ


ಬೆಳಗಾವಿ: ರವಿವಾರ ದಿ.೧೦ ರಂದು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ‘ಮಹಿಳಾ ಸಮಾವೇಶ’ ಕಾರ್ಯಕ್ರಮ ನಗರದ ಬಸವರಾಜ ಕಟ್ಟಿಮನಿ ಸಭಾ ಭವನದಲ್ಲಿ ಜರುಗಲಿದೆ. ಕಾರ್ಯಕ್ರಮದ ಸರ್ವಾಧ್ಯಕ್ಷತೆ ಯನ್ನು ಮಕ್ಕಳ ಹೃದ್ರೋಗ ತಜ್ಞರು ಮತ್ತು ಸಾಹಿತಿಗಳಾದ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ವಹಿಸಲಿದ್ದು ಹಿರಿಯ ಸಾಹಿತಿಗಳಾದ ನೀಲಗಂಗಾ ಚರಂತಿಮಠ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಮಂಗಲಾ ಮೆಟಗುಡ್, ಹಿರಿಯ ಸಾಹಿತಿಗಳಾದ ಆಶಾ ಕಡಪಟ್ಟಿ, ಹಮೀದಾ ಬೇಗಂ ದೇಸಾಯಿ ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ‘ಮಹಿಳಾ ಸಬಲೀಕರಣದ ಪರಿಪೂರ್ಣತೆ’,’ದೇಶದ ಸ್ವಾತಂತ್ರ‍್ಯಕ್ಕೆ ಮಹಿಳೆಯರ ಕೊಡುಗೆ’, ‘ಭಾಷಾ ಬಾಂಧವ್ಯ’, ‘ಕೌಟುಂಬಿಕ ಬಾಂಧವ್ಯ’, ವಿಷಯಗಳ ಕುರಿತಾಗಿ ಚಿಂತನ ಗೋಷ್ಠಿಗಳು ಮತ್ತು ಜಿಲ್ಲೆಯ ಮಹಿಳಾ ಕವಿಯತ್ರಿಯರಿಂದ ‘ಕವಿಗೋಷ್ಠಿ’ ಕಾರ್ಯಕ್ರಮ ನಡೆಯಲಿದೆ.ಸಾಯಂಕಾಲ ೫ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು ಇದರ ಅಧ್ಯಕ್ಷತೆಯನ್ನು ಸಾಹಿತಿಗಳಾದ ಜ್ಯೋತಿ ಬದಾಮಿ ವಹಿಸಲಿದ್ದಾರೆ. ನಂತರ ಪುಷ್ಕಲಾ ನೃತ್ಯಾಲಯ ತಂಡದವರಿಂದ ನೃತ್ಯ ಕಾರ್ಯಕ್ರಮ ಮತ್ತು ಲೇಖಕಿಯರ ಸಂಘದ ಸದಸ್ಯೆಯರಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಎಲ್ಲಾ ಕಾರ್ಯಕ್ರಮಗಳು ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೋಳ್ಳಿ ರವರ ನೇತೃತ್ವದಲ್ಲಿ ಜರುಗಲಿ ದ್ದು ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಿಗೆ ಸನ್ಮಾನ ಸಮಾರಂಭ ಜರುಗಲಿದ್ದು ಜಿಲ್ಲೆಯ ಮಹಿಳೆಯರು ಸೇರಿದಂತೆ ಲೇಖಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಲೇಖಕಿಯರ ಸಂಘದ ಕಾರ್ಯದರ್ಶಿ ರಾಜನಂದಾ ಘಾರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Gadi Kannadiga

Leave a Reply