ಬೀಡಿಯಲ್ಲಿ ಸರಕಾರಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಆಚರಣೆ

Prasanna Kumbar
WhatsApp Group Join Now

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀಡಿ ತಾಲೂಕ ಖಾನಾಪುರ. ದಿನಾಂಕ 8-3-2025 ರಂದು ನಮ್ಮ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರೀಸಲಾಯಿತು. ಕಾರ್ಯಕ್ರಮವನ್ನು ಖಾನಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ವಿಠ್ಠಲ ಸೊ ಹಲಗೇಕರ್ ಹಾಗೂ ಸಿ ಡಿ ಸಿ ಕಮಿಟಿಯ ಸದಸ್ಯರಾದ ಡಾ. ಸವಿತಾ ಜವಳಿ ಯವರು ಉದ್ಘಾಟನೆಯನ್ನ ನೆರವೇರಿಸಿದರು. ಶಾಸಕರು ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಉದ್ದೇಶಿಸಿ , ಸಮಾಜದಲ್ಲಿ ಮಹಿಳೆಯರ ಪಾತ್ರ ಹಾಗೂ ಕೊಡುಗೆ ಬಗ್ಗೆ ಮಾತನಾಡಿದರು. ಮಹಿಳೆ ಅಬಲೆಯಲ್ಲ ಸಬಲೆ ಎಂಬ ಸಂದೇಶ ಸಾರಿದರು.. ಮುಖ್ಯ ಅಥಿತಿಗಳಾಗಿ ಶ್ರೀ ಸಂತೋಷ ಕಲ್ಲಪ್ಪ ಕಾಶಿಲ್ಕರ್ ಮತ್ತು ಶ್ರೀಮತಿ ಶಾಂತಾ ಲಕ್ಶ್ಮಣ ಕುಂದೆಲಕರ್ . ಸಮಾಜ ಸೇವಕರಾದ ನಾಗೇಂದ್ರ ಚೌಗಲಾ. ಕೇದಾರಲಿಂಗ್ ಸಂಭೋಜಿ. ಹಾಗೂ ಬಿಡಿ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು. ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಸಿರಅಹ್ಮದ್ ಜಂಗೂಭಾಯಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸ್ವಾಗತ ಭಾಷಣವನ್ನು ಮಹಿಳಾ ವೇದಿಕೆ ಸಂಚಾಲಕರಾದ ಡಾ. ವಿಜಯಲಕ್ಷ್ಮೀ ನಾಯಕ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಮಂಜುಳಾ ಅಣಜಿಯವರು ನಿರ್ವಹಿಸಿದರು.

WhatsApp Group Join Now
Telegram Group Join Now
Share This Article
error: Content is protected !!