ಬೆಳಗಾವಿ, ಏ.೨೧ : ತಾಲೂಕಾ ಸ್ವೀಪ್ ಸಮೀತಿ ಬೈಲಹೊಂಗಲ ವತಿಯಿಂದ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ಎನ್ ಆರ್ ಎಲ್ ಎಮ್ ಮಹಿಳಾ ಒಕ್ಕೂಟದ ಸದಸ್ಯರ ಸಹಯೋಗದಲ್ಲಿ ಏಪ್ರಿಲ್.೨೦ ೨೦೨೩ ರಂದು ವಿಧಾನ ಸಭಾ ಚುನಾವಣೆ ೨೦೨೩ ರ ಅಂಗವಾಗಿ ಮಹಿಳಾ ಸಂಘದ ಸದಸ್ಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ಮಹಿಳೆಯರ ಮತವು ಅಮೂಲ್ಯವಾದದ್ದು ಕಡ್ಡಾಯವಾಗಿ ಮತದಾನ ಮಾಡುವುದು ನಿಮ್ಮೆಲ್ಲರ ಹೊಣೆ ಎಂದು ತಾಲೂಕಾ ಸ್ವೀಪ್ ಸಮೀತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್ ಎಸ್ ಸಂಪಗಾಂವಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿ ಮಹಿಳೆಯೂ ತನ್ನ ಕುಟುಂಬ ನಿರ್ವಹಣೆಯನ್ನು ಸ್ವಸಹಾಯ ಸಂಘದಿಂದ ಮತ್ತು ನರೇಗಾ ಯೋಜನೆಯ ಮೂಲಕ ಉದ್ಯೋಗ ಪಡೆದುಕೊಂಡು ಜೀವನ ಸಾಗಿಸಬೇಕು ಪ್ರಸ್ತುತ ನರೇಗಾ ಕೂಲಿ ೩೧೬/- ಇರುತ್ತದೆ. ಮೇ ೧೦-೨೦೨೩ ರಂದು ನಡೆಯುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಅದು ಅತೀ ಅಮೂಲ್ಯವಾಗಿದೆ ಎಂದು ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಕರೆ ನೀಡಿದರು.
ಸಹಾಯಕ ನಿರ್ದೇಶಕರಾದ (ಪಂ.ರಾಜ್) ರಘು ಬಿ ಎನ್, ಸಹಾಯಕ ನಿರ್ದೇಶಕರಾದ ಪ್ರಕಾಶ ಮೇಳವಂಕಿ, ಎಮ್ ತಾಪಂ ವ್ಯವಸ್ಥಾಪಕರಾದ ಎ ಇಂಚಲಮಠ, ಚುನಾವಣೆ ನೋಡಲ್ ಅಧಿಕಾರಿಯಾದ ಎಸ್ ಬಿ ಸಂಗನಗೌಡರ, ಪ್ರಕಾಶ ಗುಂಡಗಾಂವಿ, ಎಸ್ ವ್ಹಿ ಹಿರೇಮಠ, ಸಚೀನ, ನಾಗೇಂದ್ರ ಇಂಗಳಗಿ, ಆನಂದ ಮಾಲಗತ್ತಿಮಠ ಹಾಗೂ ಎನ್ ಆರ್ ಎಲ್ ಎಮ್ ಸಿಬ್ಬಂದಿಗಳು ಸಂತೋಷ, ಭಾರತಿ ಮತ್ತು ಮಹಿಳಾ ಸಂಘದ ಪ್ರತಿನಿಧಿಗಳು ಹಾಜರಿದ್ದರು.
Gadi Kannadiga > Local News > ಮಹಿಳೆಯರ ಮತವು ಅಮೂಲ್ಯವಾದದ್ದು: ಎಸ್ ಎಸ್ ಸಂಪಗಾಂವಿ
ಮಹಿಳೆಯರ ಮತವು ಅಮೂಲ್ಯವಾದದ್ದು: ಎಸ್ ಎಸ್ ಸಂಪಗಾಂವಿ
Suresh21/04/2023
posted on
