ಬಳ್ಳಾರಿ, ಫೆ.೧೦: ಮಾನವ ಸಹಜ ಆಸೆ, ಆಮಿಷಗಳನ್ನು ಮೀರಿದ ಮಹನೀಯರನ್ನು ಮಹಾತ್ಮರೆಂದು ಕರೆಯುತ್ತಾರೆ. ಮಹಾತ್ಮರು ಆಡಿದ ಮಾತುಗಳೆಲ್ಲಾ ವಚನಗಳೆಂದು ಕರೆಯಬಹುದು. ಕಾಲಹರಣಕ್ಕಾಗಿ ಆಡುವ ಮಾತುಗಳಲ್ಲಿ ಸತ್ಯಾಂಶವಾಗಲೀ, ಸಹಜಾಚರಣೆಯಾಗಲೀ ಇರುವುದಿಲ್ಲ. ಸಂದರ್ಭಕ್ಕನುಗುಣವಾಗಿ ಮಾತುಗಳು ತಮ್ಮ ಸ್ವರೂವನ್ನು ಬದಲಿಸಿಕೊಳ್ಳುತ್ತವೆ. ಆದರೆ ತೂಕಬದ್ಧವಾಗಿ ಮನದಾಳದಿಂದ ಯೋಚಿಸಿ ಆಡಿದ ಮಹಾತ್ಮರ ಮಾತುಗಳು ಎಂದು ತಮ್ಮ ಸ್ವರೂಪವನ್ನು ಬದಲಿಸಿಕೊಳ್ಳಲಾರವು. ಜೊತೆಗೆ ಈ ಮಾತುಗಳು ತ್ರಿಕಾಲ ಸತ್ಯಗಳಾಗಿ ಉಳಿಸಯುತ್ತವೆ. ಈ ಕಾರಣದಿಂದ ಮಹಾತ್ಮರ ಮಾತುಗಳನ್ನು ವಚನಗಳೆಂದು ಕರೆಯಲಾಗಿದೆ ಎಂದು ಮೋಕದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಮೆಹತಾಬ್ ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮೋಕದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಸಿದ್ದ ೨೭೨ನೇ ಮಹಾಮನೆ ಲಿಂ|| ಸಿ.ಎಂ.ವೀರಭದ್ರಯ್ಯ ದತ್ತಿ ಮತ್ತು ಕೆ.ಎಂ.ಗವಿಸಿದ್ದಯ್ಯ ಸರೋಜಮ್ಮ ದತ್ತಿ ಕಾರ್ಯಕ್ರಮದಲ್ಲಿ ವಚನ ವೈಭವ ವಿಷಯ ಕುರಿತು ಮಾತನಾಡುತ್ತಾ, ೧೨ನೇ ಶತಮಾನದ ಶಿವಶರಣರು ಆಡಿದ ಅಂದಿನ ಮಾತುಗಳೆಲ್ಲಾ ಇಂದು ವಚನ ರೂಪದದಲ್ಲಿ ಲಭ್ಯವಿದ್ದು, ಇವು ಬದುಕಿಗೆ ದಾರಿದೀಪಗಳಾಗಿವೆ ಎಂದರು.
ವಸತಿ ಶಾಲೆಯ ಪ್ರಾಂಶುಪಾಲರಾದ ಅನಸೂಯ .ಕೆ. ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಪಠ್ಯದ ವಚನಗಳನ್ನು ಕೇವಲ ಪರೀಕ್ಷೆಗಾಗಿ ಓದದೇ ಬದುಕಿನ ದಾರಿದೀಪಗಳೆಂದು ಅರಿತು ಓದಬೇಕೆಂದರು. ವಿದ್ಯಾರ್ಥಿನಿ ಲಕ್ಷ್ಮಿಪ್ರಿಯ ತಂಡದವರು ವಚನ ಗಾಯನ ಮಾಡಿದರು. ಶಿಕ್ಷಕ ಶೇಖಣ್ಣನವರು ಸ್ವಾಗತ ಕೋರಿದರು. ಪ್ರಣತಿ ವಚನ ಗಾಯನ ಮಾಡಿದಳು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಪ್ಪ ದತ್ತಿ ಧಾತೃ, ದಾಸೋಹಿಗಳನ್ನು ಪರಿಚಯಿಸಿ, ಶರಣು ಸಮರ್ಪಣೆ ಮಾಡಿದರು. ಕನ್ನಡ ಶಿಕ್ಷಣ ಸಿ.ರ‍್ರಿಸ್ವಾಮಿ ಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಮಕ್ಕಳಿಗೆ ಸಿಹಿ ಹಂಚಿ, ಪೆನ್ನುಗಳನ್ನು ವಿತರಣೆ ಮಾಡುವ ಮೂಲಕ ಕಾರ್ಯಕ್ರಮ ಮಂಗಲವಾಯಿತು.
Gadi Kannadiga > State > ಮಹಾತ್ಮರ ಮನದಾಳದ ಮಾತುಗಳೇ ವಚನಗಳು :ಮೆಹತಾಬ್
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023