This is the title of the web page
This is the title of the web page

Please assign a menu to the primary menu location under menu

Local News

ಮೃತ ಸೋತೋಷ್ ಪಾಟೀಲಗೆ  ವರ್ಕ್ ಲೆಟರ್ ನಾವು ನೀಡಿದ್ದು ನಿಜ:  ಜೆ.ಪಂ ಮಾಜಿ ಅಧ್ಯಕ್ಷೆ ಆಶಾ ಐಹೊಳೆ 


ಬೆಳಗಾವಿ: ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಜಿಲ್ಲಾ ಪಂಚಾಯತಿಯಿಂದ ವರ್ಕ್ ಲೆಟರ್ ಪಡೆದಿದ್ದರು ಎನ್ನಲಾಗುವ ಹಾಗೂ ಅಧ್ಯಕ್ಷರೇ ಆ ಲೆಟರ್ ಅನ್ನು ನೀಡಿದ್ದಾರೆಂಬ ಇವತ್ತಿನ ಹೊಸ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಅದ್ಯಕ್ಷೆ ಆಶಾ ಐಹೊಳೆ ಅವರು ಎಲ್ಲಾ ಪಂಚಾಯತಿಯಂತೆ ಹಿಂಡಲಗಾ ಗ್ರಾಮ ಪಂಚಾಯತಿಯವರು ಕೂಡಾ ಅಧ್ಯಕ್ಷರ ಸಮೇತ ಎಲ್ಲಾ ಸದಸ್ಯರು ಆಗಮಿಸಿ ಗ್ರಾಮದೇವಿಯ ಜಾತ್ರೆಯ ನಿಮಿತ್ಯ, ಅಭಿವೃದ್ದಿಯ ದೃಷ್ಟಿಯಿಂದ ಕೆಲವು ಅವಶ್ಯಕ ಕಾಮಗಾರಿಗಳಿಗೆ ಅನುಮತಿ ಕೇಳಿದ್ದರಿಂದ ಆವತ್ತು ನಾನು ಪತ್ರದ ಮೂಲಕ ಕಾಮಗಾರಿಗೆ ಅವಕಾಶ ಮಾಡಿ ಕೊಟ್ಟೆವು.

4 ಕೋಟಿ ಕಾಮಗಾರಿ ದೊಡ್ಡ ಮೊತ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅವರ ಗ್ರಾಮಮಟ್ಟದಲ್ಲಿ ಯಾವ ಕೆಲಸ , ಎಷ್ಟು ಮೊತ್ತದ್ದು, ಮತ್ತು ಅನುದಾನದ ಕುರಿತು ಎಲ್ಲಾ ಗ್ರಮಪಂಚಾಯತಿ ಹಂತದಲ್ಲೇ ತಿರ್ಮನಿಸಲಾಗುತ್ತೆ..

ಕೆಲಸ ಶುರು ಮಾಡಲಿಕ್ಕೆ ಅನುಮತಿ ಮಾತ್ರ ನಾವು ನೀಡಿದ್ದು, ಮುಂದೆ ಆ ಕಾಮಗಾರಿಯ ಪ್ರಕ್ರಿಯೆ ಹೇಗೆ ನಡೆಯಿತು, ಎಲ್ಲಿಗೆ ಮುಗಿಯಿತು ಅಂತಾ ಇಲ್ಲಿವರೆಗೂ ನನಗೆ ಸ್ವಲ್ಪವೂ ಮಾಹಿತಿ ಬಂದಿಲ್ಲ..

ಆ ಪಂಚಾಯತಿಯ ಎಲ್ಲಾ ಸದಸ್ಯರು ದಿನಾಂಕ 15 /2/ 2021 ರಂದು ಬಂದು ನನ್ನ ಕಡೆಯಿಂದ ಕಾಮಗಾರಿ ಮಾಡಲಿಕ್ಕೆ ಪತ್ರ ಸ್ವೀಕರಿಸಿಕೊಂಡು ಹೋದರು.. ಆಮೇಲೆ ಆ ಕಾಮಗಾರಿಯನ್ನು 26/ 2/ 2021 ರಂದು ಅನುಮೋದಿಸಲಾಗಿದೆ..

ಕಳೆದ ವರ್ಷ ಮೇ ತಿಂಗಳಲ್ಲಿ ನನ್ನ ಅಧಿಕಾರಾವಧಿ ಮುಗಿದಿದ್ದು, ಅಲ್ಲಿವರೆಗೂ, ಈ ಕಾಮಗಾರಿಗೆ ಕುರಿತ ಯಾವ ಕಡತಗಳು, ಪೇಪರಗಳು ನನ್ನ ಕಡೆ ಬಂದಿಲ್ಲ

ಸಂತೋಷ್ ಪಾಟೀಲ್ ನನಗೆ ನೇರವಾಗಿ ಯಾವತ್ತೂ ಬೇಟಿ ಆಗಿಲ್ಲ,, ಈ ಕಾಮಗಾರಿ ಬಗ್ಗೆ ಸಚಿವ ಈಶ್ವರಪ್ಪ ಅವರ ಜೊತೆನೂ ಏನೂ ಮಾತುಕತೆ ನಡೆದಿಲ್ಲ,, ಸಂತೋಷ್ ಪಾಟೀಲರ ವಿಷಯದಲ್ಲಿ ಈ ರೀತಿ ಆಗಿದ್ದು ವಿಷಾದನೀಯ, ಯಾರಿಗೂ ಈ ರೀತಿ ಆಗಬಾರದು ಎಂದು ಈ ಸಂಧರ್ಭದಲ್ಲಿ ಆಶಾ ಐಹೊಳೆ ಸ್ಪಷ್ಟಪಡಿಸಿದರು.


Gadi Kannadiga

Leave a Reply