ಬೆಳಗಾವಿ: ತಾಲೂಕಿನ ವಿಜಯ ನಗರ ವಲಯದ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬೆಳಗಾವಿ ಮತ್ತು ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾದಕ ವಸ್ತುಗಳ ವಿರೋಧಿ ದಿನಾಚಣೆಯ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅದ್ಭುತ ಮತ್ತು ಉಪಯೋಗ ಪೂರಿತ ಕಾರ್ಯಕ್ರಮವನ್ನು ನಡೆಸಿದ್ದಕ್ಕೆ ಕೃತಜ್ಞತೆಗಳು ಎಂದರು.
ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ £ರ್ದೇಶಕರಾದ ವಸಂತ ಸಾಲಿಯಾನ್ ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರದ ಪರಂಪರೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ £Ãಡಿದರು.
ಮುಖ್ಯ ಅತಿಥಿಗಳಾಗಿ ಡಾಕ್ಟರ್ ಗೌತಮ್, ಡಾಕ್ಟರ್ ಸುಭಾಷ್, ಡಾಕ್ಟರ್ ಕಿರಣ್ ಹಳೆಮನೆ ಮತ್ತು ಜಿಲ್ಲಾ £ರ್ದೇಶಕರಾದ ಸತೀಶ ನಾಯಕ ಮಾತಾಡಿದರು.
ಈ ಸಂದರ್ಭದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳು ಹೊರ ಬರಬೇಕಾದ ರೀತಿ ಕುರಿತು ಜನಜಾಗೃತಿ ಕಾರ್ಯಕ್ರಮಗಳ ಯೋಜನಾಧಿಕಾರಿ ಭಾಸ್ಕರ್ ಮಾಹಿತಿ £Ãಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅಧಿಕ್ಷಕ ಕೆ.ಪಿ ಶಹಾಬುದ್ದೀನ್, ಆಡಳಿತ ಅಧಿಕಾರಿ ಬಿ.ಎಸ್ ಪೂಜಾರಿ, ಆಡಳಿತ ಯೋಜನಾಧಿಕಾರಿ ದೇವರಾಜ ಉಪಸ್ಥಿತರಿದ್ದರು.
ಕೇಂದ್ರ ಕಾರಾಗೃಹದ ಸಂಪನ್ಮೂಲ ಸಂಯೋಜಕರಾದ ಶೇಶಿಕಾಂತ ಥಿ ಉಪಾದ್ಯಾಯರು £ರೂಪಿಸಿದರು. ತಾಲೂಕಿನ ಯೋಜನಾಧಿಕಾರಿ ನಾಗರಾಜ್ ಹದ್ಲಿ ಯವರು ಸ್ವಾಗತಿಸಿದರು ವಲಯದ ಮೇಲ್ವಿಚಾರಕಿ ಸಂಗೀತ ವಂದಿಸಿದರು ಮತ್ತು ಸೇವಾ ಪ್ರತಿ£ಧಿ ಗಾಯತ್ರಿ ಮತ್ತು ಸಂತೋಷ ಸಹಕರಿಸಿದರು .ಸುಮಾರು ೨೫೦ ಮಂದಿ ವಿಚಾರಣಾದಿನಾ ಕೈದಿಗಳು ಉಪಸ್ಥಿತರಿದ್ದರು.
Gadi Kannadiga > Local News > ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಕಾರ್ಯಾಗಾರ
ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಕಾರ್ಯಾಗಾರ
Suresh24/07/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023