This is the title of the web page
This is the title of the web page

Please assign a menu to the primary menu location under menu

Local News

ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ಅಧ್ಯಯನದಲ್ಲಿ ಸಂಶೋಧನಾ ವಿದ್ಯಾಶಾಸ್ತ್ರದ ಮಹತ್ವ ಕುರಿತು ಕಾರ್ಯಾಗಾರ


ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗÀ ವತಿಯಿಂದ ದಿನಾಂಕ:೨೮-೦೫-೨೦೨೨ ರಂದು “ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ಅಧ್ಯಯನದಲ್ಲಿ ಸಂಶೋಧನಾ ವಿದ್ಯಾಶಾಸ್ತ್ರದ ಮಹತ್ವ ಕುರಿತು” ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಪ್ರೊ. ಆಶೋಕ ಡಿಸೋಜ ಮುಖ್ಯಸ್ಥರು, ಸಮಾಜ ಕಾಂiÀið ಅಧ್ಯಯನ ವಿಭಾಗ ಇವರು ತಮ್ಮ ಉದ್ಘಾಟನಾ ನುಡಿಯಲ್ಲಿ ಸಂಶೋಧನೆಯ ಮಹತ್ವ ಹಾಗೂ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಹೇಗೆ ಸಂಶೋಧನೆಯನ್ನು ಹಮ್ಮಿಕೊಳ್ಳಬೇಕು ಎಂದು ಹೇಳುತ್ತಾ ಒಂದು ದಿನದ ಕಾರ್ಯಗಾರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ರೊ. ಆರ್. ಎನ್. ಮನಗೋಳಿ, ಮುಖ್ಯಸ್ಥರು, ಅಪರಾಧಶಾಸ್ತ್ರ ಮತ್ತು ಅಪರಾಧ ನ್ಯಾಯ ವಿಭಾಗ ಇವರು ಕಾರ್ಯಕ್ರಮದ ಅಧ್ಯಕ್ಷತೆ ನುಡಿಯಲ್ಲಿ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತಾರ್ಕಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಶೋಧನೆಯ ಬಗ್ಗೆ ಹೆಚ್ಚಿನ ಅನುಭವವನ್ನು ಪಡೆದುಕೊಳ್ಳಬೇಕು ಹಾಗೂ ಅವರ ಸಂಶೋಧನೆ ಭೌದ್ಧಿಕ ಬೆಳವಣಿಗೆಗೆ ಸಹಾಯಕಾರಿಯಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಸಂಯೋಜಕರಾದ ಡಾ. ಮಹೇಶ್ವರಿ ಎಸ್. ಕಾಚಾಪುರ, ಸಹಾಯಕ ಪ್ರಾಧ್ಯಾಪಕಿ, ಡಾ. ನಂದಿನಿ ದೇವರಮನಿ ಮತ್ತು ಶ್ರೀ ಚಂದ್ರಶೇಖರ ಎಸ. ವಿ. ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಮುಸಕಾನ ಕಾರ್ಯಕ್ರಮ ನಿರುಪಿಸಿದರು, ಕುಮಾರಿ ಗಾಯತ್ರಿ ಸ್ವಾಗತಿಸಿದರು, ಕುಮಾರಿ ವಿಜೇತಾ ವಂದಿಸಿದರು.


Gadi Kannadiga

Leave a Reply