This is the title of the web page
This is the title of the web page

Please assign a menu to the primary menu location under menu

Local News

ವಿಶ್ವ ಮಾದಕ ದ್ರವ್ಯ ಸೇªನೆ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನ


ಬೆಳಗಾವಿ: “ಮಾದಕ ದ್ರವ್ಯಗಳನ್ನು ವರ್ಜಿಸಿ, ವ್ಯಸನಿಯನ್ನಲ್ಲ” ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಅಂಟೋನಿಯೊ Pರವ್ಹಾಲೊ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮಾನಸಿಕರೋಗ ಚಿಕಿತ್ಸಾ ವಿಭಾಗದ ಯೋಗ ಸಭಾಂಗಣದಲ್ಲ್ಲಿ ನಡೆದ ವಿಶ್ವ ಮಾದಕ ದ್ರವ್ಯ ಸೇªನೆ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿ£ದ ಅಂಗವಾಗಿ ಮಾತನಾಡುತ್ತಿದ್ದರು. ಇಂದು ನಾವು ಅನೇಕ ರೀತಿಯ ರೋಗಿಗಳನ್ನು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಮಾದಕ ದ್ರವ್ಯ ವ್ಯಸನಿಗಳನ್ನು ಗಮನಿಸುತ್ತೇವೆ. ಅದರಲ್ಲಿ ಹೆಚ್ಚಾಗಿ ಯುವಕರೇ ಇರುವದು ತುಂಬ ಬೇಸರವೆನ್ನಿಸುತ್ತದೆ. ಅವರ ರೋಗದ ಇತಿಹಾಸ ಗಮನಿಸಿದಾಗ ನಮಗೆ ಹೆಚ್ಚಾಗಿ ಮನೆಯ ವಾತಾವರಣ, ಸಹಪಾಠಿ, ಕೆಟ್ಟ ಜನರ ಗೆಳೆತನ ಹಾಗೂ ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಆಗಬಹುದಾದ ಮಾನಸಿಕ ತೊಂದರೆಗಳೇ ಕಾಣಸಿಗುತ್ತವೆ. ಆದರೆ ಇಂತಹ ವ್ಯಸನಿಗಳನ್ನು ಪ್ರಾರಂಭದ ಹಂತದಲ್ಲಿಯೇ ಪ್ರೀತಿ, ಕಾಳಜಿಗಳನ್ನು ತೋರುವ ಮೂಲಕ ವ್ಯಸನಗಳನ್ನು ಆದಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸಬಹುದಾಗಿದೆ. ಅಲ್ಲದೇ ವ್ಯಸನಕ್ಕೆ ತುತ್ತಾದ ವ್ಯಕ್ತಿಗೂ ಸಹ ಅದೇ ರೀತಿಯ ಪ್ರೀತಿ ಆದರಗಳನ್ನು ತೋರುವದರಿಂದ ವ್ಯಸನಿಯ ಮನಃ ಪರಿವರ್ತನೆಯಿಂದ ವ್ಯಸನಿಗಳಿಗೆ ವ್ಯಸನದಿಂದ ಹೊರಬರಲು ಅನುಕೂಲ ಮಾಡಿಕೊಡಬೇಕು ಎಂದು ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಹೆಸರಾಂತ ಮಾನಸಿಕರೋಗ ತಜ್ಞರಾದ ಡಾ. ಸುಮಿತಕುಮಾರ ದುರ್ಗೋಜಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತ್ತ “ ಮಾನಸಿಕ ಆರೋಗ್ಯವು ಪರಿಪೂರ್ಣ ಆರೋಗ್ಯದ ಅವಿಭಾಜ್ಯ ಅಂಗವಾಗಿದೆ. ಮಾದಕ ವಸ್ತುಗಳ ಸೇವನೆ ಹೆಚ್ಚಾಗಿ ಮಾನಸಿಕ ಅಸ್ವಸ್ಥತೆಗೆ ಕಾgಣÀವಾಗುತ್ತಿರುವುದು ಕಂಡು ಬರುತ್ತಿದ್ದು ಯುವ ಜನಾಂಗವು ಈ ಮಾದಕ ವ್ಯಸನಗಳ ದಾಸರಾಗುತ್ತಿರುವದು ನಿಜಕ್ಕೂ ಆತಂಕದ ಬೆಳವಣಿಗೆಯಾಗಿದೆ. ವ್ಯಸನಿಗಳು, ಮಾನಸಿಕ ತೊಂದರೆ ಹೊಂದಿರುವವರಿಗೆ ನಮ್ಮಲ್ಲಿ ಅತ್ಯಲ್ಪ ದರದಲ್ಲಿ ಚಿಕಿತ್ಸೆ ಉಪಲಬ್ದವಿದ್ದು ಅಗತ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಮ್ಮ ಯು.ಎಸ್.ಎಮ್. ಕೆ ಎಲ್ ಇ ಯ ೪ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ಉಪಯೋಗಿದಂದಾಗುವ ದುಷ್ಪರಿಣಾಮದ ಬಗೆಗೆ ಕಿರು ನಾಟಕವನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಮನೋರೋಗ ತಜ್ಞರಾz ಡಾ. ಅಶ್ವಿನಿ ಪದ್ಮಶಾಲಿ, ಆಸ್ಪತ್ರೆಯ ಸಿಬ್ಬಂದಿ ವರ್ಗ, ಯು.ಎಸ್.ಎಮ್. ಕೆ ಎಲ್ ಇ ಯ ೪ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸುಮಾರು ೫೦ಕ್ಕೂ ಅಧಿಕ ಜ£ರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ. ಮಲ್ಲಿಕಾರ್ಜುನ ನಿರೂಪಿಸಿದರು ಮತ್ತು ಶ್ರೀಮತಿ ದೀಪಾ ಪಾಟಿಲ ವಂದಿಸಿದರು.


Leave a Reply