This is the title of the web page
This is the title of the web page

Please assign a menu to the primary menu location under menu

Local News

“ವಿಶ್ವ ವಿಕಲಚೇತನರ ದಿನಾಚರಣೆ” ೨೦೨೨ ವಿಕಲಚೇತನರು ಆತ್ಮ ವಿಶ್ವಾಸದಿಂದ ಸಾಧನೆ ಮಾಡಬೇಕು: ಮುರಳಿ ಮನೋಹರ ರೆಡ್ಡಿ


ಬೆಳಗಾವಿ, ಡಿ.೦೩: “ವಿಶ್ವ ವಿಕಲಚೇತನರ ದಿನಾಚರಣೆ”-೨೦೨೨ ಪ್ರಯುಕ್ತ ಶನಿವಾರ (ಡಿ.೩) ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ “ವಿಶ್ವ ವಿಕಲಚೇತನರ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮುರಳಿ ಮನೋಹರ ರೆಡ್ಡಿ ಅವರು ವಿಕಲಚೇತನರಿಗೆ ಜೀವನದಲ್ಲಿ ಜಿಗುಪ್ಸೆ ಹೊಂದದೇ ಆತ್ಮ ವಿಶ್ವಾಸದಿಂದ ಮುನ್ನಡೆಯುಬೇಕು. ಆತ್ಮ ಸ್ಥೆöÊರ್ಯದಿಂದ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಧೈರ್ಯ ತುಂಬಿದರು.ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡೆ ಮತ್ತು ಸಾಂಸ್ಕೃತಿ ಸ್ಪರ್ಧೆಗಳಲ್ಲಿ ವಿಜೇತರಾದ ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಮತ್ತು ಕ್ರೀಡಾ ಪಟುಗಳಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮತ್ತು ರಾಜ್ಯ/ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿಕಲಚೇತನರನ್ನು ಸನ್ಮಾನಿಸಲಾಯಿತು.ಅದೇ ರೀತಿಯಲ್ಲಿ ಯು.ಡಿ.ಐ.ಡಿ. ಪ್ರಗತಿ ಸಾಧಿಸಲು ಕಾರಣಕರ್ತರಾದ ಡಾ. ಚಾಂದನಿ ಜಿ. ದೇವಡಿ, ಡಾ. ವಿನಯಕುಮಾರ ರೆಡ್ಡಿ, ಕು. ಶ್ರೀದೇವಿ ಆಡಿಯೋಲಾಜಿಸ್ಟ್, ತಾಲೂಕು ನೋಡಲ್ ಅಧಿಕಾರಿಗಳು ಮತ್ತು ಎಂ.ಆರ್.ಡಬ್ಲೂö್ಯ. ಇವರನ್ನು ಸನ್ಮಾನಿಸಲಾಯಿತು. ವಿಶೇಷ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪ, ಡಾ. ಚಾಂದಣಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಜಿ. ದೇವಡಿ, ರಾಘವೇಂದ್ರ ಅಣವೇಕರ ಹಾಗೂ ಜಿಲ್ಲೆಯ ಸುಮಾರು ೫೦೦ ಜನ ವಿಕಲಚೇತನರು, ವಿಶೇಷ ಶಾಲೆಗಳ ಸಿಬ್ಬಂದಿಯವರು, ನೋಡಲ್ ಅಧಿಕಾರಿಗಳು, ಎಂ.ಆರ್.ಡಬ್ಲೂö್ಯ/ವಿ.ಆರ್.ಡಬ್ಲೂö್ಯ. ಜಿಲ್ಲಾ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply