This is the title of the web page
This is the title of the web page

Please assign a menu to the primary menu location under menu

Local News

ಸಮತಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ


ಬೆಳಗಾವಿ:ಜೂನ್-೮: “ಗಿಡ ಉಳಿದರೆ ಅರಣ್ಯ ಉಳಿಯುತ್ತದೆ, ಅರಣ್ಯ ಉಳಿದರೆ ಉತ್ತಮ ಪರಿಸರ ದೊರೆಯುತ್ತದೆ. ಹೀಗಾಗಿ ಮನೆಗೊಂದು ಗಿಡ ನೆಡುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕಿದೆ” ಎಂದು ಬೆಳಗಾವಿಯ ಉಪ ವಲಯ ಅರಣ್ಯ ಅಧಿಕಾರಿ ಪಿ. ಕೆ. ಪಂಚಾಕ್ಷರಿ ಮಿಂಚಿನಾಳ ಹೇಳಿದರು.
ನಗರದ ಕಣಬರಗಿಯ ಸಿದ್ದೇಶ್ವರ ಬೆಟ್ಟದ ಪರಿಸರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ‘ಅರಣ್ಯ ಬೀಜ ಬಿತ್ತನೆ’ ಕಾರ್ಯಕ್ರಮ ನಿಮಿತ್ಯ
ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯ ಮಕ್ಕಳಿಗೆ ಅರಣ್ಯ ರಕ್ಷಣೆ ಕುರಿತು ಮಾಹಿತಿ ನೀಡಿದ ಅವರು, ” ಪ್ರತಿ ಮಗು ಒಂದು ಮರ ಬೆಳೆಸಿದರೆ ಆಗುವ ಪ್ರಯೋಜನ ಸಕಲ ಜೀವಿಗಳಿಗೆ ದೊರೆಯುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಬೀಜ ಬಿತ್ತನೆಯಲ್ಲಿ ಪಾಲ್ಗೊಂಡ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ ಅವರು ಮಾತನಾಡಿ, ” ಒಂದು ಮರ ಬೆಳೆಸಿದರೆ ಅದು ತನ್ನ ಜೀವಿತಾವಧಿಯಲ್ಲಿ ಪ್ರತಿಯಾಗಿ ಏನೂ ಬಯಸದೆ ಅಂದಾಜು ನೂರು ಜನರಿಗೆ ಬೇಕಾದ ಆಮ್ಲಜನಕ ನೀಡಬಲ್ಲದು. ಹಣ್ಣು ಹಂಪಲ ಕೊಡಬಲ್ಲದು. ಹೀಗಾಗಿ ನಾವೆಲ್ಲ ಪರಿಸರ ರಕ್ಷಿಸುವ ಪಣ ತೋಡೋಣ” ಎಂದು ಹೇಳಿದರು. ಅರಣ್ಯ ರಕ್ಷಕ ಉಮೇಶ ಕೋಳೇಕರ, ಅರಣ್ಯ ಸಿಬ್ಬಂದಿ ಹಾಗೂ ಶಾಲೆಯ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.


Gadi Kannadiga

Leave a Reply