This is the title of the web page
This is the title of the web page

Please assign a menu to the primary menu location under menu

Local News

ವಿಶ್ವ ಪರಿಸರ ದಿನಾಚರಣೆ


ಬೆಳಗಾವಿ: ಜೂನ್-:”ಆಧುನಿಕ ಜೀವನ ಪದ್ಧತಿಯಿಂದ ನಮ್ಮ ಪರಿಸರ ಕಲುಷಿತವಾಗುತ್ತಿದೆ. ಹೀಗಾಗಿ ಮನೆಗೊಂದು ಮರ ನೆಡುವ ಮೂಲಕ ಉತ್ತಮ ಪರಿಸರ ನಿರ್ಮಿಸುವಲ್ಲಿ ಸಹಕಾರಿಯಾಗಬೇಕಿದೆ” ಎಂದು ಆರ್ಷ ವಿದ್ಯಾ ಆಶ್ರಮದ ಚಿತ್ಪ್ರಕಾಶಾನಂದ ಸ್ವಾಮೀಜಿ ಕರೆ ನೀಡಿದರು. ನಗರದ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ಇವುಗಳ ವತಿಯಿಂದ ಮಂಡೋಳಿ ರಸ್ತೆಯ ಶಾಂತಿನಗರದ ಆರ್ಷ ಆಶ್ರಮದಲ್ಲಿ
‘ವಿಶ್ವ ಪರಿಸರ ದಿನಾಚರಣೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ” ಮುಂದಿನ ಪೀಳಿಗೆಗೆ ನಾವು ಆಸ್ತಿ ಮಾಡುವುದಕ್ಕಿಂತ ಒಳ್ಳೆಯ ಪರಿಸರ, ಸಮೃದ್ಧ ಅರಣ್ಯ ಸಂಪತ್ತು ಉಳಿಸಿಟ್ಟರೆ ಸಾಕು. ಅದರಿಂದ ಸಕಲ ಜೀವಿಗಳು ಆರೋಗ್ಯದಿಂದ ಬದುಕಬಲ್ಲವು. ಆ ನಿಟ್ಟಿನಲ್ಲಿ ಭವಿಷ್ಯದಲ್ಲಿ ಅಧಿಕಾರಿಯಾಗಿ ನೇಮಕ ಆಗಬಲ್ಲ ನಮ್ಮ ಬೆಳಗಾವಿಯ ಹೆಮ್ಮೆಯ ಪುತ್ರಿ ಸಹಿತ್ಯಾ ಆಲದಕಟ್ಟಿ ಕಾರ್ಯ ನಿರ್ವಸಲಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯು.ಪಿ.ಎಸ್. ಸಿ. ಪರೀಕ್ಷೆಯಲ್ಲಿ ೨೫೦ನೇ ಸ್ಥಾನ ಪಡೆದ ಬೆಳಗಾವಿಯ ಸಾಹಿತ್ಯ ಆಲದಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಆಶ್ರಮದ ಮಕ್ಕಳು ಉತ್ತಮ ಪರಿಸರ ಕುರಿತು ಮಾತನಾಡಿ ಪರಿಸರ ಗೀತೆ ಹಾಡಿದರು.
ಭಾರತಿ ಕೆರೂರ, ಭಾರತಿ ರತ್ನಪ್ಪಗೋಳ ಹಾಗೂ ಸುಲೋಚನ ವಸ್ತ್ರದ ಅವರ ಪ್ರಾರ್ಥಿನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಆಶ್ರಮದ ಉಪಾಧ್ಯಕ್ಷರಾದ ತೃಶೀಲಾ ಪಾಯಪ್ಪನವರ ಸ್ವಾಗತಿಸಿದರು. ದರ್ಶನಾ ನಿಲಜಗಿ ಪರಿಚಯಿಸಿದರು.
ರತ್ನಶ್ರೀ ಗುಡೇರ ಪ್ರಾಸ್ತಾವಿಕ ಮಾತನಾಡಿದರು.ವಿದ್ಯಾ ಪಾಟೀಲ ನಿರೂಪಿಸಿದರು. ಸಂಧ್ಯಾ ಗುಂಡಾ ವಂದಿಸಿದರು.


Gadi Kannadiga

Leave a Reply