ಮೂಡಲಗಿ: ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಜನರಿಗೆ ಮಾರ್ಗದರ್ಶನ ನೀಡುವ ಜೊತೆಯಲ್ಲಿ ನೈರ್ಮಲ್ಯಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವತ್ಛತ ಅಭ್ಯಾಸಗಳು, ನೀರಿನ ಸಂರಕ್ಷಣೆ, ಪರಿಸರ ಸ್ವಚ್ಛತೆ ಹಾಗೂ ಆಯಾಯ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಆರೋಗ್ಯ ಸಮಸ್ಯೆಗಳ ತ್ವರಿತ ತಪಾಸಣೆ ಮತ್ತು ಚಿಕಿತ್ಸೆ ಕುರಿತು ಏ.೭ರಂದು ಇಡೀ ದೇಶದಾದಂತ್ಯ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಡಾ ಭಾರತಿ ಕೋಣಿ ಹೇಳಿದರು.
ಶನಿವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಭಾಗ್ಯ ಇದಕ್ಕಿಂತ ಮಿಗಿಲಾದುದು ಯಾವುದು ಇರಲಾರದು, ಸದೃಢ ಆರೋಗ್ಯ ಕಾಪಾಡಿಕೂಳ್ಳುವುದು ಒಂದು ಕಲೆ. ನಮ್ಮ ಜೀವನ ಶೈಲಿ, ಆಆರ ಪದ್ಧತಿ ಇತ್ಯಾದಿಗಳೆಲ್ಲವೂ ಆರೋಗ್ಯದ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತಲ್ಲೇ ಇರುತ್ತವೆ. ಅನಾರೋಗ್ಯಕ್ಕೆ ತುತ್ತಾದಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಕಾಯಿಲೆ ಬರುವ ಮೊದಲೇ ಅದರ ಬಗ್ಗೆ ಎಚ್ಚರ ವಹಿಸಿ, ತಡೆಗಟ್ಟಲು ಜಾಗೃತರಾಗುವುದು ಅತೀ ಮುಖ್ಯ ಎಂದರು.
ಡಾ ಸರಸ್ವತಿ ಪಾಟೀಲ ಮಾತನಾಡಿ, ಕೋವಿಡ್ ಮುಗಿಯಿತು ಎಂಬ ಮಾನಸಿಕತೆಯಲ್ಲಿ ಸಂಪೂರ್ಣ ಮೈಮರೆವು ಒಳ್ಳೆಯದಲ್ಲ. ಮಕ್ಕಳು, ವಯಸ್ಸಾದವರು, ಶ್ವಾಸಕೋಶ, ಕಿಡ್ನಿ ಸಂಬಂಧಿಸಿದ ಕಾಯಿಲೆ ಇರುವವರು ಜನದಟ್ಟಣೆಯ ಪ್ರದೇಶದಿಂದ ದೂರು ಇರಬೇಕು. ರೋಗ ನಿರೋಧಕ ಶಕ್ತಿ ಚೆನ್ನಾಗಿರಲು ಬೇಕಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಮನೆ ಸಹಿವಾಗಿ ಸಾವಿರುವ ಪರಿಸರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಶುಚಿತ್ವಕ್ಕೆ ಆದ್ಯತೆ ನೀಡಲೇ ಬೇಕು ಎಂದರು.
ಬೇಸಗೆಯಲ್ಲಿ ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಲೇಬೇಕು. ಬೇಸಗೆಯಲ್ಲ ಕಿಡ್ನಿ ಸ್ಟೋನ್ ಸಹಿತವಾಗಿ ಕೆಲವೊಂದು ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೀರು ಹೆಚ್ಚೆಚ್ಚು ಕುಡಿಯಬೇಕು. ದೇಹ ಒಣಗಲು ಬಿಡಬಾರದು ಆದಷ್ಟು ಆಹಾರ ಸೇವನೆಯಲ್ಲಿ ಎಚ್ಚರ ವಹಿಸವೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಾ ಬಿಲ್ಕುಶ್ ಖಾಜಿ, ಆಶಾ ಕಾರ್ಯಕರ್ತರ ಮೇಲ್ವಿಚಾರಕಿ ಎಸ್ ಬಿ ಕಲಕಟ್ಟಿ, ಆಸ್ಪತ್ರೆಯ ಸಿಬ್ಬಂದಿಗಳಾದ ಅಶ್ವಿನಿ ಸಾಂಬರೆ, ಜ್ಯೋತಿ ಕಬ್ಬೂರ, ತಸ್ಲೀಮ್ ಪೀರಜಾದೆ, ಗೀತಾ ಗದಗ, ಇರ್ಷಾದ್ ಪೀರಜಾದೆ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು.
Gadi Kannadiga > Local News > ವಿಶ್ವ ಆರೋಗ್ಯ ದಿನಾಚರಣೆ
ವಿಶ್ವ ಆರೋಗ್ಯ ದಿನಾಚರಣೆ
Suresh08/04/2023
posted on
