This is the title of the web page
This is the title of the web page

Please assign a menu to the primary menu location under menu

Local News

ವಿಶ್ವ ಆರೋಗ್ಯ ದಿನಾಚರಣೆ


ಬೆಳಗಾವಿ:- “ಎಲ್ಲರಿಗೂ ಆರೋಗ್ಯ” ಎಂಬ ಘೋಷವಾಕ್ಯದಂತೆ ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ನಿಜವಾದ ಸಂಪತ್ತು, ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಎ.ಸಿ ಧಾರವಾಡ ಅವರು ಕೆ ಎಲ್ ಇ ಆಸ್ಪತ್ರೆಯಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರನೆಯ ಕಾರ್ಯಕ್ರಮವನ್ನು ಉಧ್ಘಾಟಿಸುತ್ತ ಮಾತನಾಡುತ್ತಿದ್ದರು. sಸ್ಪರ್ಧೆಯಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ ನಾವು ಇಂದು ಆರೋಗ್ಯಕರ ಹವ್ಯಾಸಗಳನ್ನು ಮರೆತಿರುವದು ಆತಂಕಕಾರಿಯಾಗಿದೆ. ನಿಯಮಿತ ಊಟ ವ್ಯಾಯಾಮ ಸದ್ವಿಚಾರಗ¼ಂತಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ರೋಗಮುಕ್ತ, ದಿರ್ಘಾಯುÄಸ್ಸನ್ನು ಹೊಂದಬಹುದು ಎಂದು ಕಿವಿಮಾತು ಹೇಳಿದರು.
ಮೆಡಿಶಿನ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ ಬಿ, ಅವರು ಮಾತನಾಡುತ್ತ ನೈಸರ್ಗಿಕವಾಗಿ ಸಿಗುª ಹಾಗೂ ಮನೆಯಲ್ಲೆ ದೊರೆಯುವ ಸಂಪನ್ಮೂಲಗಳಿಂದ ಮತ್ತು ಸರಳ ಜೀವನ ಶೈಲಿಯಿಂದ ಆರೋಗ್ಯಕರ ಜೀವನವನ್ನು ಹೊಂದಬಹುದಾಗಿದೆ. ನಾವು ಸೇವಿಸುವ ಆಹಾರವೇ ಒಂದು ಮಹತ್ತರ ಔಷಧಿಯಾಗಿದ್ದು, ಅದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿ ಅದಕ್ಕೆ ತಕ್ಕಂತೆ ವ್ಯಾಯಾಮಗಳನ್ನು ಮೈಗೂಡಿಸಿಗೊಳ್ಳಬೇಕು. ಇದರಿಂದ ನಾವು ಆರೋಗ್ಯವಾಗಿದ್ದು ನಮ್ಮ ಸುತ್ತಮುತ್ತಲ ಜನರನ್ನು ಆರೊಗ್ಯವಂತರನ್ನಾಗಿಸಲು ಸಹಕಾರಿಯಾಗಿದೆ ಎಂದರು.
ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಕಾಂತ ಮೇತ್ರಿ ಅವರು ಮಾತನಾಡುತ್ತ, ಸರಕಾರವು ಜನರ ಆರೋಗ್ಯದ ಹಿತದೃಷ್ಟೀಯಿಂದ ಹಲವಾರು ಸರಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಜನಸಂ¥ರ್ಕಾಧಿಕಾರಿಯಾದ ಕೃಷ್ಟಾ ಗುಮಾಸ್ತೆ ಅವರು ಆರೋಗ್ಯದ ಮಹತ್ವದ ಬಗ್ಗೆ ತಿಳಿಸಿದರು.
ವೈದ್ಯಾಧಿಕಾರಿಯಾದ ಡಾ. ಮದನ ಡೊಂಗ್ರೆ ಮಾತನಾಡುತ್ತಾ, ಪ್ರತಿಯೊಬ್ಬ ಮನುಷ್ಯನು ಆರೋಗ್ಯಕರವಾಗಿ ಜೀವನ ನಡೆಸಲು ನಿಯಮಿತ ಊಟ, ವ್ಯಾಯಾಮ, ಆಚಾರ, ವಿಚಾರ, ಧ್ಯಾನ ಮತ್ತು ಯೋಗಗಳನ್ನು ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಲ್ಲಿ ಆರೊಗ್ಯಕರ ಜೀವನ ನಡೆಸಲು ರಹದಾರಿಯಾಗಿದೆ ಕರೆ ನೀಡಿದರು. ಆರೋಗ್ಯದ ಬಗ್ಗೆ ಸಮಸ್ಯಗಳಿದ್ದರೆ ಅವುಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ವೈದ್ಯರಾದ ಡಾ.ನಾಸಿರ ಅವರು ಸಲಹೆ ನೀಡಿದರು.
ಈ ಸಂದರ್ಬದಲ್ಲಿ ಮೆಡಿಶಿನ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ ಬಿ, ಡಾ. ಆರ್.ಆರ್.ವಾಳ್ವೆಕರ, ಡಾ. ಶ್ರೀಕಾಂತ ಮೇತ್ರಿ, ಡಾ. ಯುವರಾಜ ಯಡ್ರಾವಿ, ಡಾ. ಶ್ರೀಕಾಂತ ರಾವರಿ ಹಾಗೂ ಆಸ್ಪತ್ರೆಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಜನಸಂಪರ್ಕ ಅಧಿಕಾರಿ ಅರುಣ ನಾಗಣ್ಣವರ ನಿರೂಪಿಸಿ ವಂದಿಸಿದರು.


Leave a Reply