This is the title of the web page
This is the title of the web page

Please assign a menu to the primary menu location under menu

Local News

“ಜಾಗತಿಕ ಹೃದಯ ದಿನಾಚರಣೆೆ – ೨೦೨೨” ಘೋಷ ವಾಕ್ಯ : “ಹೃದಯಕ್ಕಾಗಿ ಹೃದಯವನ್ನು ಬಳಸಿ”


ಬೆಳಗಾವಿ,ಸೆ.೨೯: ಜಿಲ್ಲಾ ಆಸ್ಪತ್ರೆ ಬೆಳಗಾವಿಯಲ್ಲಿ ಗುರುವಾರ (ಸೆ.೨೯) ವಿಶ್ವ ಹೃದಯ ದಿನಾಚರಣೆಯನ್ನು ಡಾ. ಅಶೋಕ ಶೆಟ್ಟಿ –ವೈದ್ಯಕೀಯ ನಿರ್ದೇಶಕರು ಜಿಲ್ಲಾ ಆಸ್ಪತ್ರೆ ಬೀಮ್ಸ್ ಬೆಳಗಾವಿ, ಡಾ. ಅಣ್ಣಾಸಾಹೇಬ ಪಾಟೀಲ- ವೈದ್ಯಕೀಯ ಅಧೀಕ್ಷಕರು ಜಿಲ್ಲಾ ಆಸ್ಪತ್ರೆ ಬೀಮ್ಸ್ ಬೆಳಗಾವಿ, ಡಾ. ಸುಧಾಕರ- ಜಿಲ್ಲಾ ಶಸ್ತ್ರ ಚಿಕಿತ್ಸಕರು ಜಿಲ್ಲಾ ಆಸ್ಪತ್ರೆ ಬೆಳಗಾವಿ, ಡಾ. ಬಿ.ಎನ್ ತುಕ್ಕಾರ- ಜಿಲ್ಲಾ ಸವೇಕ್ಷಣಾಧಿಕಾರಿಗಳು, ಬೆಳಗಾವಿರವರ ಉಪಸ್ಥಿತಿಯಲ್ಲಿ ಹೃದಯ ಸಂಬಂಧಿತ ಖಾಯಿಲೆಗಳಿಗೆ ಪರಿಶೀಲನೆ, ತಪಾಸಣೆ ಮತ್ತು ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಯಿತು.
ದಿನದಂದು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ರೋಗಿಗಳಿಗೆ ಆರೋಗ್ಯ ಶಿಕ್ಷಣವನ್ನು ನೀಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಡಾ. ಅಶೋಕ ಶೆಟ್ಟಿಯವರು ಮಾತನಾಡುತ್ತಾ ಜೀವನ ಶೈಲಿ ವ್ಯತ್ಯಾಸದಿಂದ ಬರುವ ಖಾಯಿಲೆಗಳನ್ನು ತಡೆಗಟ್ಟಲು ಉತ್ತಮ / ಸಾತ್ವಿಕ ಆಹಾರ, ತಂಬಾಕು ಮತ್ತು ಸರಾಯಿ ದುಷ್ಚಟದಿಂದ ದೂರವಿರುವುದು, ನಿಯಮಿತವಾದ ವ್ಯಾಯಾಮ, ಒತ್ತಡದ ಜೀವನ ಶೈಲಿಯನ್ನು ಬದಲಾವಣೆ ಮಾಡುವುದರ ಮೂಲಕ ಎಲ್ಲ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ವಿವರವಾಗಿ ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಬಿ.ಎನ್ ತುಕ್ಕಾರರವರು ಪ್ರಾಸ್ತಾವಿಕ ನುಡಿಯಲ್ಲಿ “ಹೃದಯಕ್ಕಾಗಿ ಹೃದಯವನ್ನು ಬಳಸಿ” ಈ ವರ್ಷದ ಘೋಷವಾಕ್ಯದ ಬಗ್ಗೆ ವಿವರವಾಗಿ ತಿಳಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಡಾ. ಗಿರೀಶ ದಂಡಗಿ, ಡಾ. ನಿಂಬಾಳ, ಡಾ. ಗಿರಿಧರ ಪಾಟೀಲ, ಡಾ. ನಿತಿನ್ ಹೆಚ್, ಡಾ. ಶೈಲಜಾ ತಮ್ಮಣ್ಣವರ, ಡಾ. ವಿಜಯಮಾಲಾ ಪೂಜಾರಿ, ಡಾ. ಪುಷ್ಪಾ, ಡಾ. ಸರಳಾ, ಡಾ. ವಾಸಂತಿ, ಡಾ. ರಾಜೇಂದ್ರ ಬಾಳಿಕಾಯಿ ಹಾಗೂ ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್ ಎಲ್ಲ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


Gadi Kannadiga

Leave a Reply