ಬೆಳಗಾವಿ:- ಮಲೇರಿಯಾ ಈಗ ನಮ್ಮ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಹತೋಟಿಯಲ್ಲಿದ್ದು, ಇದನ್ನು ನಮ್ಮ ದೇಶದಿಂದ ೨೦೩೦ರ ಒಳಗೆ ಹಾಗೂ ಕರ್ನಾಟಕದಿಂದ ೨೦೨೫ರ ಒಳಗೆ ನೀರ್ಮೂಲನೆ ಮಾಡಬೇಕಾಗಿದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚರಕಾ ಸಭಾಂಗಣದಲ್ಲಿ ಪ್ರತಿ ವರ್ಷದ ಏಪ್ರಿಲ ೨೫ರಂದು ನಡೆಯುವ ವಿಶ್ವ ಮಲೇರಿಯಾ ದಿನಾಚರಣೆಯ ಅಂಗವಾಗಿ ಮಾತನಾಡುÀತ್ತಿದ್ದರು. ಮಲೇರಿಯಾ ಒಂದು ಮಾರಣಾಂತಿಕ ಖಾಯಿಲೆಯಾಗಿದ್ದು ನಾವರಿಯದಂತೆಯೇ ನಮ್ಮನ್ನು ಬಂದು ಸೇರುವಂತಹುದಾಗಿದೆ. ಅದರಲ್ಲಿಯೂ ಸೊಳ್ಳೆಗಳಲ್ಲಿ ಒಂದು ಪ್ರಕಾರವಾದ ಅನಾಫೆಲಿಸ ಎಂಬ ಹೆಣ್ಣು ಸೊಳ್ಳೆ ಕಚ್ಚುವದರಿಂದ ಬರುತ್ತದೆ. ಈ ಸೊಳ್ಳೆಗಳು ದೀರ್ಘಕಾಲದ ವರೆಗೆ ನಿಂತ ನೀರಿನಲ್ಲಿ ಹುಟ್ಟಿಕೊಳ್ಳುವ ಸೊಳ್ಳೆಯ ಜಾತಿಯದ್ದಾಗಿದೆ. ಈ ರೋಗದ ಪ್ರಾಥಮಿಕ ಲಕ್ಷಣಗಳಾದ ಚಳಿ ಜ್ವg, ಬೆವರುವದು , ಹೀಗೆ ಮುಂತಾದ ಲಕ್ಷಣಗಳನ್ನು ಒಳಗೊಂಡಂತಹ ವ್ಯಕ್ತಿಗಳು ತಕ್ಷಣವೇ ವೈದ್ಯರನ್ನು ಕಂಡು ತಕ್ಕ ಉಪಚಾರವನ್ನು ಹೊಂದುವದು ಅತ್ಯಗತ್ಯವಾಗಿದೆ ಮತ್ತು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಮನೆಯ ಒಳಗೆ ಯಾವದೇ ಕಾರಣಕ್ಕೂ ನೀರನ್ನು ದೀರ್ಘಕಾಲದ ವರೆಗೆ ತೆರೆದ ಪಾತ್ರೆಗಳಲ್ಲಿ ಸಂಗ್ರಹಿಸಿಡಬಾರದು ಎಂದು ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ ಬಿ ಅವರು ವಯಸ್ಕರಲ್ಲಿ ಮಲೇರಿಯಾ, ಅದರ ನಿರ್ವಹಣೆ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಉಪನ್ಯಾಸ ನೀಡಿದರು. ಹೆಸರಾಂತ ಮಕ್ಕಳ ತಜ್ಞ ಡಾ. ಸಂತೋಷಕುಮಾರ ಕರಮಸಿ ಅವರು ಮಲೇರಿಯಾದಂತಹ ಮಾರಕ ರೋಗದಿಂದ ಮಕ್ಕಳನ್ನು ಯಾವ ರೀತಿಯಾಗಿ ಕಾಪಾಡಿಕೊಳ್ಳಬೇಕು ಎಂದು ತಿಳುವಳಿಕೆ ನೀಡಿದರು.
ಕಾರ್ಯಕ್ರಮವನ್ನು ಮಕ್ಕಳ ತಜ್ಞ ಡಾ. ಬಸವರಾಜ ಕುಡಸೋಮಣ್ಣವರ ಅವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕೆ ಎಲ್ ಇ ಸೆಂಟಿನರಿ ಇನ್ಸಿ÷್ಟಟ್ಯುಟ್ ಆಫ್ ನರ್ಸಿಂಗ ಸೈನ್ಸ ನ ಬಿಎಸ್‌ಸಿ ನರ್ಸಿಂಗ ವಿದ್ಯಾರ್ಥಿಗಳು, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಆರೋಗ್ಯ ಸಹಾಯಕಿ ವಿದ್ಯಾರ್ಥಿಗಳು ಸಮಸ್ತ ದಾದಿ ವರ್ಗ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Gadi Kannadiga > Local News > ವಿಶ್ವ ಮಲೇರಿಯಾ ದಿನಾಚರಣೆ
ವಿಶ್ವ ಮಲೇರಿಯಾ ದಿನಾಚರಣೆ
Suresh25/04/2023
posted on
