ಬೆಳಗಾವಿ,ಏ.೨೧ : ಪ್ರತಿ ವರ್ಷದಂತೆ ಈ ವರ್ಷವೂ ಸಹ ಏಪ್ರಿಲ್ ೨೫ ರಂದು “ವಿಶ್ವ ಮಲೇರಿಯಾ ದಿನ” ವನ್ನು ಆಚರಿಸಲಾಗುತ್ತಿದ್ದು, “ನವೀನ ವಿಧಾನಗಳನ್ನು ಬಳಸೋಣ – ಮಲೇರಿಯಾ ಕಡಿಮೆ ಮಾಡಿ, ಜೀವ ಉಳಿಯೋಣ” (ಊಚಿಡಿಟಿess iಟಿಟಿovಚಿಣioಟಿ ಣo ಡಿeಜuಛಿe ಣhe ಉಟobಚಿಟ ಒಚಿಟಚಿಡಿiಚಿ ಜiseಚಿse buಡಿಜeಟಿ ಚಿಟಿಜ Sಚಿve ಟives) ಈ ವರ್ಷದ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು.
ಕರ್ನಾಟಕ ರಾಜ್ಯವು ಕೈಗೊಂಡ ವಿವಿಧ ಸಮರೋಪಾದಿಯ ಚಟುವಟಿಕೆಗಳ ಅನುಷ್ಠಾನದಿಂದ ಮಲೇರಿಯಾ ರೋಗವು ನಿವಾರಣಾ ಹಂತಕ್ಕೆ ತಲುಪಿದ್ದು, ೨೫ ರ ವೇಳೆಗೆ ಮಲೇರಿಯಾ ನಿವಾರಣಾ ಗುರಿ ಸಾಧಿಸುವ ಉದ್ದೇಶವನ್ನು ಹೊಂದಲಾಗಿದ್ದು, ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದು, ೨೦೨೧ರ ವಾರ್ಷಿಕ ವರದಿಯಂತೆ ಮಲೇರಿಯಾ ನಿವಾರಣೆಯ ವರ್ಗೀಕರಣದಲ್ಲಿ ರಾಜ್ಯವು ವರ್ಗ ಅಚಿಣegoಡಿಥಿ-೧ : ಇಟimiಟಿಚಿಣioಟಿ Phಚಿse ಅಂದರೆ ನಿವಾರಣಾ ಹಂತವನ್ನು ತಲುಪಿದೆ.
ಮಲೇರಿಯಾ ನಿವಾರಣಾ ಗುರಿ ಸಾಧನೆಯ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಚುರುಕುಗೊಳಿಸಿದಾಗ ಮಾತ್ರವೇ, ಶೂನ್ಯ ಮಲೇರಿಯಾ ವರ್ಗೀಕರಣವನ್ನು ತಲುಪಬಹುದಾಗಿದೆ.
ಈ ನಿಟ್ಟಿನಲ್ಲಿ ವಿಶ್ವ ಮಲೇರಿಯಾ ದಿನವನ್ನು ಎಲ್ಲ ಹಂತಗಳಲ್ಲಿ (ರಾಷ್ಟ್ರೀಯ/ರಾಜ್ಯ/ಜಿಲ್ಲೆ/ತಾಲ್ಲೂಕು/ಹೋಬಳಿ /ಪ್ರಾ.ಆ.ಕೇಂದ್ರ/ನಗರ ಆ.ಕೇಂದ್ರ/ಉಪ ಕೇಂದ್ರ ಹಾಗೂ ಗ್ರಾಮಮಟ್ಟ , ಇತ್ಯಾದಿ) ಅಭಿಯಾನಗಳ ಮೂಲಕ ನಿರಂತರ ಬೆಂಬಲ ಮತ್ತು ಸಮುದಾಯಗಳ ಭಾಗವಹಿಸುವಿಕೆಯಿಂದ, ಸಾಮೂಹಿಕ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಬಲಪಡಿಸುವುದು ಹಾಗೂ ಆಯೋಜಿಸಿ ಯಶಸ್ವಿಗೊಳಿಸಿ, ನಿವಾರಣಾ ಗುರಿಯನ್ನು ಸಾಧಿಸುವುದು ಅಗತ್ಯವಾಗಿದೆ.
ಸೋಂಕಿತ ಅನಫಿಲೀಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಬರುತ್ತದೆ. ಚಳಿ-ನಡುಕ, ನಂತರ ಜ್ವರ ಇವು ಮಲೇರಿಯದ ಲಕ್ಷಣಗಳಾಗಿದ್ದು, ಲಕ್ಷಣಗಳು ಇದ್ದಲ್ಲಿ ಮಲೇರಿಯಾದಿಂದ ನೀವು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ತಕ್ಷಣ ರಕ್ತ ಪರೀಕ್ಷೆ ಮಾಡಿಸಬೇಕು. ಸಂಪೂರ್ಣ ಚಿಕಿತ್ಸೆಯಿಂದ ಮಲೇರಿಯಾ ಗುಣವಾಗುತ್ತದೆ ಎಂದು ಬೆಳಗಾವಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ಎಂ.ಎಸ್.ಪಲ್ಲೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಏ.೨೫ ರಂದು ವಿಶ್ವ ಮಲೇರಿಯಾ ದಿನ
More important news
ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಸಮಾವೇಶ
04/02/2023
ಫೆ.೧೨ ರಂದು ಮಾಜಿ ಸೈನಿಕರ ರ್ಯಾಲಿ
04/02/2023
ಪ್ರೇಮಾದೇವಿ ತುಬಚಿ £ಧನ
04/02/2023
ರಾಧಾ ಕೃಷ್ಣ ನಾಟಕ ಉದ್ಘಾಟನೆ
04/02/2023