This is the title of the web page
This is the title of the web page

Please assign a menu to the primary menu location under menu

State

ವಿಶ್ವ ಪ್ರವಾಸೋದ್ಯಮ ದಿನಾಚರಣೆ : ಸೈಕಲ್ ಜಾಥಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ


ಕೊಪ್ಪಳ, ಸೆ. ೨೭ : ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ನಗಾರಭಿವೃದ್ಧಿ ಕೋಶ, ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿಂದು (ಸೆ.೨೭) ಚಾಲನೆ ನೀಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ “ಪ್ರವಾಸೋದ್ಯಮ ಪುನರಾವಲೋಕನ’’ ಸಂದೇಶದಡಿ ಜಿಲ್ಲಾಡಳಿತ ಭವನದಿಂದ ಗದಗ ರಸ್ತೆಯ ಮಳೆಮಲ್ಲೇಶ್ವರ ದೇವಸ್ಥಾನದ ವರೆಗೆ ಸೈಕಲ್ ಜಾಥಾ ಮಂಗಳವಾರದಂದು ಏರ್ಪಡಿಸಲಾಗಿದ್ದು, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯ ರಾಣಿ ಕೆ.ವಿ., ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಹಾಗೂ ಇತರೆ ಅಧಿಕಾರಿಗಳು ಸೈಕಲ್ ಚಲಾಯಿಸಿ ಅಭಿಯಾನಕ್ಕೆ ಕೈಜೋಡಿಸಿದರು.
ಸೈಕಲ್ ಜಾಥದಲ್ಲಿ ಗೋ-ಗ್ರೀನ್ ಸಂಸ್ಥೆಯ ೨೦ ಜನ ಪ್ರವಾಸಿ ಮಿತ್ರರು, ವಿವಿಧ ಶಾಲೆಗಳ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಪ್ರವಾಸ ಮಾಡಿ ಆರೋಗ್ಯವಾಗಿರಿ, ಪ್ರವಾಸ ಮಾಡಿ ಸಂತೋಷ ಪಡಿ, ಪ್ರವಾಸದಿಂದ ಅನುಭವ ಪಡೆ, ಪಂಪಾ ಸರೋವರ ಹಿಂದೂ ಪುರಾಣದ ಮಹಾ ಆಗರ, ಆನೆಗುಂದಿಯ ನವವೃಂದಾವನ ನವ-ಯತಿವರ್ಯರ ಶಕ್ತಿಸ್ಥಾನ ಹಾಗೂ ಇತರ ಪ್ರವಾಸಿ ತಾಣಗಳ ಬಗ್ಗೆ ಸಂದೇಶ ಫಲಕಗಳು ಜಾಥದಲ್ಲಿ ಕಂಡುಬಂದವು.
ಇಂಡಿಯನ್ ಸ್ವಚ್ಛತಾ ಲೀಗ್ -೨೦೨೨ರ “ಸಹಿ ಅಭಿಯಾನ”ಕ್ಕೆ ಚಾಲನೆ :
೭೫ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ, ಕೊಪ್ಪಳ ಜಿಲ್ಲೆಗೆ ೨೫ ವರ್ಷಗಳ ಸಂಭ್ರಮ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ನಗಾರಭಿವೃದ್ಧಿ ಕೋಶ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾದ “ಇಂಡಿಯನ್ ಸ್ವಚ್ಛತಾ ಲೀಗ್-೨೦೨೨ರ “ಸಹಿ ಅಭಿಯಾನ” ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸಹಿ ಮಾಡುವುದರ ಮೂಲಕ ಚಾಲನೆ ನೀಡಿದರು.
ಇಂಡಿಯನ್ ಸ್ವಚ್ಛತಾ ಲೀಗ್-೨೦೨೨ರ ಸಹಿ ಅಭಿಯಾನದ ಬ್ಯಾನರ್ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಅಳವಡಿಸಲಾಗಿದೆ. ಇದರಲ್ಲಿ “ನಾನು ಸ್ವಯಂಪರಣೆಯಿಂದ ನನ್ನ ಕುಟುಂಬ, ಬಂಧುಗಳ ಹಾಗೂ ಸ್ನೇಹಿತರಿಗೆ ಘನತ್ಯಾಜ್ಯ ವಸ್ತುಗಳ ವಿಲೇವಾರಿ ೨೦೧೬ರ ನಿಯಮಗಳನ್ನು ಜಾರಿಗೆ ತರಲು ಶ್ರಮಿಸುತ್ತೇನೆ ಮತ್ತು ಪ್ಲಾಸ್ಟಿಕ್ ಬಳಕೆಯ ಬಗ್ಗೆ ತಿಳುವಳಿಕೆ ನೀಡುತ್ತಾ, ಪರಿಸರ ಸ್ನೇಹಿ ಬ್ಯಾಗ್‌ಗಳನ್ನೇ ಬಳಕೆ ಮಾಡುತ್ತೇನೆ, ನಮ್ಮ ಭವಿಷ್ಯದ ಆರೋಗ್ಯದ ಜವಾಬ್ದಾರಿ ನಮ್ಮ ಮೇಲಿದೆ. ಸ್ವಚ್ಛ ಆರೋಗ್ಯಕರ ಪರಿಸರ ಮತ್ತು ಕಸಮುಕ್ತ ನಗರವನ್ನು ನಿರ್ಮಿಸುತ್ತೇನೆಂದು ಒಪ್ಪಿ ಈ ಕೆಳಗೆ ಸಹಿ ಮಾಡುತ್ತೇನೆ’’ ಎಂಬ ಸಂದೇಶವಿದ್ದು, ಜಿಲ್ಲಾಧಿಕಾರಿಗಳು, ಅಪಾರ ಜಿಲ್ಲಾಧಿಕಾರಿಗಳು, ಡಿಯುಡಿಸಿ ಪಿಡಿ, ತಹಶೀಲ್ದಾರರು, ಇತರೆ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಸಹಿ ಮಾಡಿ, ಈ ಅಭಿಯಾನಕ್ಕೆ ಕೈಜೋಡಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಅಹಮದ್ ಹುಸೇನ್ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರವಾಸೋದ್ಯಮ ಇಲಾಖೆ, ಡಿಯುಡಿಸಿ ಅಧಿಕಾರಿಕಾರಿ ಹಾಗೂ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply