This is the title of the web page
This is the title of the web page

Please assign a menu to the primary menu location under menu

Local News

ವಿಶ್ವ ಕ್ಷಯರೋಗ ದಿನಾಚರಣೆ-೨೦೨೩ ಕ್ಷಯರೋಗ ಮುಕ್ತ ಭಾರತಕ್ಕೆ ಶ್ರಮಿಸೋಣ: ಜಿಲ್ಲಾಧಿಕಾರಿ ನಿತೇಶ ಪಾಟೀಲ


ಬೆಳಗಾವಿ, ಮಾ.೨೪: ಕ್ಷಯರೋಗ ನಿರ್ಮೂಲನೆಯಡಿಯಲ್ಲಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಸಮಾಜದ ಕೊನೆಯ ವ್ಯಕ್ತಿಗಳಿಗೆ ಮುಟ್ಟಿಸಿ ೨೦೨೫ ನೇ ವೇಳೆಗೆ ಕ್ಷಯ ಮುಕ್ತ ಭಾರತವನ್ನು ಮಾಡುವ ಭಾರತ ಸರ್ಕಾರದ ಗುರಿಯನ್ನು ಮುಟ್ಟಲು ಎಲ್ಲರೂ ಕೂಡಿ ಕಾರ್ಯನಿರ್ವಹಿಸಿ, ಭಾರತದೇಶದಿಂದ ಕ್ಷಯರೋಗವನ್ನು ಓಡಿಸಲು ಕರೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕರೆ ನೀಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ , ರೆಡಕ್ರಾಸ ಸಂಸ್ಥೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಡಟೋರಿಯಮ್ ಸಭಾಭವನದಲ್ಲಿ ಶುಕ್ರವಾರ (ಮಾ.೨೪) ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯಪಾಲರಾದ ತಾವರಚೆಂದ ಗೇಹಲೋಟ ಅವರು ಬೆಳಗಾವಿ ಜಿಲ್ಲೆಯ ೧೦ ಕ್ಷಯರೋಗ ಫಲಾನುಭವಿಗಳನ್ನು ದತ್ತು ಪಡೆದಿದ್ದು, ಅವರಿಗೆ ರೆಡಕ್ರಾಸ್ ಸಂಸ್ಥೆಯ ಮೂಲಕ ಪೌಷ್ಠಿಕ ಆಹಾರದ ಕಿಟಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿ, ಆರೋಗ್ಯ ಶಿಕ್ಷಣ ಪರಿಕರಗಳನ್ನು ಬಿಡುಗಡೆ ಮಾಡಿದರು.ಸಭೆಯ ಅಧ್ಯಕ್ಷತೆಯನ್ನು ಡಾ.ಅಶೋಕ ಶೇಟ್ಟಿ ನಿರ್ದೇಶಕರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ ರವರು ವಹಿಸಿದ್ದರು.
ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ. ಅನಿಲ ಕೋರಬು ಜಿಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮಲನೆಗಾಗಿ ಜಿಲ್ಲೆಯಲ್ಲಿ ಕೈಕೊಂಡ ಕ್ರಮಗಳ ಕುರಿತು ತಿಳಿಸಿದರು.ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷಯರೋಗ ವಿಭಾಗದ ಮುಖ್ಯಸ್ಥರಾದ ಡಾ.ಗಿರೀಶ ದಂಡಗಿ ರವರು ಮಾತನಾಡಿ ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ಪಡೆಯಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಶಿವಾನಂದ ಮಾಸ್ತಿಹೋಳಿ ರವರು “ಶೀಘ್ರ ಪತ್ತೆ ತೋರಿತ ಚಿಕಿತ್ಸೆ” ಕುರಿತು ಉಪನ್ಯಾಸ ನೀಡಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸುಧಾಕರ್ ಆರ್.ಸಿ, ವೈದ್ಯಕೀಯ ಅಧೀಕ್ಷಕರಾದ ಡಾ. ಅಣ್ಣಾಸಾಹೆಬ ಪಾಟೀಲ, ಮನೋ ವೈದ್ಯರಾದ ಡಾ.ಚಂದ್ರಶೇಖರ, ಬೆಳಗಾವಿ ಜಿಲ್ಲಾ ಸರ್ವೇಕ್ಷಾಧಿಕಾರಿಗಳಾದ ಡಾ. ಬಿ. ಎನ್ ತುಕ್ಕಾರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಎಮ್.ವ್ಹಿ ಕಿವುಡಸಣ್ಣವರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಚಾಂದನಿ ದೇವಡಿ, ಬಿಮ್ಸ್ ಆಸ್ಪತ್ರೆ ಕ್ಷಯರೋಗ ಅಧಿಕಾರಿ ಡಾ.ನಾಗಲೇಕರ್, ರೇಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ಪ್ರೀಯಾ ಪುರಾಣಿಕ ಉಪಸ್ಥಿತರಿದ್ದರು.
ಪ್ರವೀಣ ಬೇಟಿಗಾರ ಸ್ವಾಗತಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಪಿ. ಯಲಿಗಾರ ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಶಿವಾಜಿ ಮಾಳಗೇನ್ನವರ ವಂದಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯಕ್ರಮವನ್ನು ಹಾಜರಿದ್ದರು.


Leave a Reply