ಬಳ್ಳಾರಿ ಜ ೩೧. ಲಕ್ಷಾಂತರ ಜನ ಅರ್ಹ ಅಭ್ಯರ್ಥಿಗಳು ತಮ್ಮ ಕನಸಿನ ವೃತ್ತಿಯಾದ ಶಿಕ್ಷಕ ವೃತ್ತಿಗೆ ಸೇರಿಸಿಕೊಳ್ಳುವ ತವಕ ಇದೀಗ ರಾಜ್ಯ ಸರ್ಕಾರ ಮಾಡಿದ ಯಡವಟ್ಟಿನಿಂದ ಹುದುಗಿಹೋಗಿದೆ. ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನಂತೆ ಒಟ್ಟು ೧೩,೩೬೩ ಹುದ್ದೆ ಭರ್ತಿಗೆ ಆಯ್ಕೆಮಾಡಿದ್ದ ಅಂತಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕೋರ್ಟ್ ರದ್ದುಮಾಡಿ, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಆಗುವಂತೆ ಮಾಡಿದೆ. ಈ ಮೂಲಕ ರಾಜ್ಯ ಸರ್ಕಾರದ ಮತ್ತೊಂದು ಅತಿ ದೊಡ್ಡ ವೈಫಲ್ಯ ಬಯಲಾಗಿದೆ. ಪಿಎಸ್‌ಐ ನೇಮಕಾತಿಯಲ್ಲೂ ಇದೇ ರೀತಿಯ ಯಡವಟ್ಟನ್ನು ರಾಜ್ಯ ಸರ್ಕಾರ ಮಾಡಿತ್ತು. ಕಿಕ್ ಬ್ಯಾಕ್ ಪಡೆದುಕೊಂಡು ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ನಗೆಪಾಟಲಿಗೆ ಈಡಾಗಿತ್ತು. ನಿಯತ್ತಾಗಿ ಪರೀಕ್ಷೆ ಬರೆದವರು ದಿಕ್ಕು ತೋಚದಂತೆ ಆಗಿದ್ದರು. ಇಲ್ಲೂ ಸಹ ಇದೀಗ ಇಂತಹದ್ದೇ ಫಲಿತಾಂಶಕ್ಕೆ ರಾಜ್ಯ ಸರ್ಕಾರ ಎಡೆಮಾಡಿಕೊಟ್ಟಿದೆ. ಹಲವು ವರ್ಷಗಳಿಂದ ಲಕ್ಷಾಂತರ ಅರ್ಹ ಪದವೀಧರರು ನೇಮಕಾತಿಗಾಗಿ ಕಾಯ್ದಿದ್ದರು. ಅಂತೂ ನೇಮಕಾತಿಗೆ ಸರ್ಕಾರ ಮುಂದಾಯಿತಲ್ಲಾ ಎಂತಲೂ ಖುಷಿಪಟ್ಟಿದ್ದರು. ಆದರೆ, ನೇಮಕಾತಿ ವೇಳೆ ಅತಿಯಾದ ಸ್ವಜನ ಪಕ್ಷಪಾತ, ಅಕ್ರಮ ಎಸಗಿದ್ದು ಬಯಲಾಗಿತ್ತು. ಈ ಪೈಕಿ ಒಂದು ನ್ಯಾಯಾಲಯದ ಮುಂದೆ ಯಾವುದೇ ಅನುಮಾನಗಳಿಗೆ ಎಡೆ ಇಲ್ಲದೆ ಸಾಬೀತಾದ ಹಿನ್ನೆಲೆಯಲ್ಲಿ ರಾಜ್ಯದ ಹೈ ಕೋರ್ಟ್ ಇಡೀ ನೇಮಕಾತಿಯನ್ನು ರದ್ದುಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಅಕ್ರಮ, ಯಡವಟ್ಟಿನ ಕಾರಣದಿಂದ ೧೭೬೮ ಇಂಗ್ಲೀಷ್, ೫೪೫೦ ಗಣಿತ, ೪೫೨೧ ಸಮಾಜ ವಿಜ್ಞಾನ, ೧೬೨೪ ಜೀವ ಶಾಸ್ತ್ರದ ಶಿಕ್ಷಕರ ನೇಮಕಕ್ಕೆ ಎಳೆ ನೀರು ಬಿಟ್ಟಂತಾಗಿದೆ ಎಂದು ವೆಂಕಟೇಶ್ ಹೆಗಡೆ, ವಕೀಲರು, ಕೆಪಿಸಿಸಿ ಮಾಧ್ಯಮ ವಕ್ತಾರರು, ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಜಂಟಿ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾಲಿ ಹುದ್ದೆ ನೇಮಕಾತಿಗೆ ಫೆ.೨೨, ೨೦೨೨ರಲ್ಲಿ ಆದೇಶ ಹೊರಡಿಸಿತ್ತು. ೭೦ ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ನ.೧೮, ೨೦೨೨ರಂದು ಅಂತಿಮ ಆಯ್ಕೆಪಟ್ಟಿ ಪ್ರಕಟಗೊಂಡಿತ್ತು. ಆಯ್ಕೆ ಪಟ್ಟಿಯಲ್ಲಿ ಹಲವು ದೋಷಗಳು ಕಂಡುಬಂದಿದ್ದವು. ಕೆಲವರಂತೂ ಸಂದರ್ಶನಕ್ಕೇ ಹಾಜರಾಗದವರು ಆಯ್ಕೆಪಟ್ಟಿಯಲ್ಲಿ ಜಾಗ ಪಡೆದುಕೊಂಡಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾದ ಪ್ರಮಾಣ ಪತ್ರಗಳ ಪೈಕಿ ಕೆಲ ವಿವಾಹಿತರು ತಮ್ಮ ಪತಿಯ ಆದಾಯ ಪ್ರಮಾಣ ಪತ್ರದ ಬದಲು ತಂದೆಯ ಆದಾಯ ಪ್ರಮಾಣ ಪತ್ರ ನೀಡಿ ಅರ್ಹತೆ ಗಿಟ್ಟಿಸಿದ್ದಾರೆ ಎಂದು ೨೦ ಜನ ಮಹಿಳಾ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಇಡೀ ನೇಮಕಾತಿಗೆ ತಡೆ ಒಡ್ಡಿದೆ. ಸರ್ಕಾರದ ಯಡವಟ್ಟು ಇದೀಗ ೭೦ ಸಾವಿರ ಜನರ ಕನಸಿಗೆ ತಣ್ಣೀರಿರೆಚಿದೆ ಎಂದು ಆಗ್ರಹವನ್ನು ವ್ಯಕ್ತ ಪಡಿಸಿದ್ದಾರೆ.