This is the title of the web page
This is the title of the web page

Please assign a menu to the primary menu location under menu

State

ಯಲಬುರ್ಗಾ: ಚುನಾವಣಾ ಅಭ್ಯರ್ಥಿಗಳು ಲೆಕ್ಕ ಸಮನ್ವಯ ಮಾಡಿಕೊಳ್ಳಿ


ಕೊಪ್ಪಳ ಮೇ ೧೭ : ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-೨೦೨೩ರ ಹಿನ್ನಲೆಯಲ್ಲಿ ಯಲಬುರ್ಗಾ ಮತಕ್ಷೇತ್ರದ ಚುನಾವಣಾ ಅಭ್ಯರ್ಥಿಗಳು ಲೆಕ್ಕ ಸಮನ್ವಯ ಮಾಡಿಕೊಳ್ಳುವಂತೆ ೬೩-ಯಲಬುರ್ಗಾ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಜನತಾ ಪ್ರಾತಿನಿಧ್ಯ ೧೯೫೧ರ ೭೭ ರಲ್ಲಿ ವಿವರಿಸಲಾದಂತೆ, ವಿಧಾನಸಭೆ ಸಾರ್ವತ್ರಿಕ ಚುನಾವಣೆ -೨೦೨೩ರ ಚುನಾವಣೆಯಲ್ಲಿ ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳು ಫಲಿತಾಂಶ ಘೋಷಣೆಯ ದಿನಾಂಕದ ೨೬ನೇ ದಿನದಂದು ಅಭ್ಯರ್ಥಿಗಳು ಚುನಾವಣಾ ವೆಚ್ಚದ ಅಂತಿಮ ಲೆಕ್ಕಪತ್ರಗಳನ್ನು ನಿಗಧಿತ ನಮೂನೆಗಳಲ್ಲಿ (ಈಗಾಗಲೆ ಉಲ್ಲೇಖಿತ ಪತ್ರದೊಂದಿಗೆ ನೀಡಿರುವ) ಅಫಿಡಾವಿಟ್ ಸೇರಿದಂತೆ ಭಾಗ ೧ ರಿಂದ ೪, ಅನೂಸೂಚಿಗಳು ೧-೧೧ ಮತ್ತು ಎ.ಬಿ.ಸಿ ವಹಿಗಳನ್ನು ಭರ್ತಿಮಾಡಿ ಮೂಲ ಅಧಿಕೃತ ಓಚರಗಳನ್ನು ದಿನಾಂಕ ಜೂನ್ ೦೮ ರಂದು ನಡೆಯುವ ಅಂತಿಮ ಲೆಕ್ಕಪತ್ರ ಸಮನ್ವಯ ಸಭೆಯಲ್ಲಿ ಅಭ್ಯರ್ಥಿಯಾಗಲಿ ಅಥವಾ ಅಧಿಕೃತ ವೆಚ್ಚದ ಏಜೆಂಟರ ಮೂಲಕ ಮುದ್ದಾಂ ಒಂದು ಪ್ರತಿ ಝರಾಕ್ಸ್ ಹಾಗೂ ಮೂಲ ಪ್ರತಿಯನ್ನು ಸಲ್ಲಿಸುವಂತೆ ಅಂತಿಮ ಲೆಕ್ಕಪತ್ರಗಳ ಸಮನ್ವಯ ಸಭೆಗೆ ಹಾಜರಾಗುವ ಪೂರ್ವದಲ್ಲಿ ಸಂಬಂಧಿಸಿದ ಚುನಾವಣಾ ಅಭ್ಯರ್ಥಿ ಅಧಿಕೃತ ವೆಚ್ಚದ ಏಜೆಂಟರು ಮೇ ೨೪ ರಂದು ಚುನಾವಣಾಧಿಕಾರಿಗಳು ೬೩-ಯಲಬುರ್ಗಾ ವಿಧಾನಸಭಾ ಕ್ಷೇತ್ರ, ಇವರ ಕಚೇರಿಗೆ ಹಾಜರಾಗಿ ಲೆಕ್ಕ ಸಮನ್ವಯಕ್ಕೆ ಪೂರ್ವ ಪರಿಶೀಲನಾ ಕಾರ್ಯವನ್ನು ಅಧಿಕೃತ ಚುನಾವಣಾ ವೆಚ್ಚದ ನಮೂನೆಗಳೊಂದಿಗೆ ಮೂಲ ಓಚರಗಳೊಂದಿಗೆ ಲೆಕ್ಕ ಸಮನ್ವಯ ಮಾಡಿಕೊಳ್ಳಲು ಯಲಬುರ್ಗಾ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.


Leave a Reply