ಕೊಪ್ಪಳ, ಅ.೧೨ : ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ ವತಿಯಿಂದ ೨೦೨೧-೨೨ನೇ ಸಾಲಿನ ಎಸ್.ಎಫ್.ಸಿ ಶೇ. ೨೪.೧೦ ಅನುದಾನದಲ್ಲಿ ವ್ಯಕ್ತಿಗತ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಣ್ಣ ಉದ್ದಿಮೆ ನಡೆಸಲು ಬ್ಯಾಂಕಿನಿಂದ ಸಾಲ ಪಡೆದುಕೊಂಡ ಫಲನುಭವಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಉದ್ದಿಮೆ ನಡೆಸುತ್ತಿರುವ ಕುರಿತು ಪತ್ರ ಮತ್ತು ಭಾವಚಿತ್ರ, ಚಾಲ್ತಿ ವರ್ಷದ ಉದ್ದಿಮೆ ಪರವಾನಿಗೆ, ಸಣ್ಣ ಉದ್ದಿಮೆ ನಡೆಸಲು ಬ್ಯಾಂಕಿನಿಂದ ಸಾಲ ಪಡೆದುಕೊಂಡ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಅಕ್ಟೋಬರ್ ೨೭ರ ಸಂಜೆ ೦೫ ಗಂಟೆಯ ಒಳಗಾಗಿ ಸಲ್ಲಿಸಬೇಕು. ಅವಧಿ ಮಿರಿ ಬಂದ ಅರ್ಜಿಗಳನ್ನು ಪರಿಗಣಿಸುವದಿಲ್ಲ ಎಂದು ಯಲಬುರ್ಗಾ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಯಲಬುರ್ಗಾ :ಎಸ್ಸಿ&ಎಸ್ಟಿ ಸಣ್ಣ ಉದ್ದಿಮೆದಾರರಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
More important news
ರೈತ ಬಾಂಧವರ ಗಮನಕ್ಕೆ
07/02/2023
ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ
07/02/2023
ಐತಿಹಾಸಿಕ ಲಕ್ಕುಂಡಿ ಉತ್ಸವ : ಮಹಿಳಾ ಗೋಷ್ಟಿ
07/02/2023