ಬೆಳಗಾವಿ: ಜಿಲ್ಲೆಯ ರಾಜಕೀಯ ನಾಯಕರಲ್ಲಿ ಭಿನ್ನಮತ ಇರುವುದು ಸತ್ಯ. ಅದರಲ್ಲಿ ಯಾವುದೇ ಮುಚ್ಚುಮರೆಯ ಇಲ್ಲ. ಆ ಬಗ್ಗೆ ನಾವು ಒಟ್ಟಿಗೆ ಕೂತು ಮಾತನಾಡಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬೆಳಗಾವಿ ಜಿಲ್ಲಾ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಒಳ ಜಗಳ ಇದ್ದರೂ ಅದನ್ನು ಮರೆತು ಎಲ್ಲಾ 18 ಸ್ಥಾನಗಳನ್ನು ಗೆಲ್ಲುವಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದೇವೆ.
ಎಲ್ಲರೂ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿದ್ದಾರೆ. ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡದೇ ಕೆಲಸ ಮಾಡುವಂತೆ ಎಲ್ಲಾ ಶಾಸಕರಿಗೆ ಸೂಚಿಸಿದ್ದೇನೆ ಎಂದರು.