This is the title of the web page
This is the title of the web page

Please assign a menu to the primary menu location under menu

State

ಪತಂಜಲಿ ಯೋಗ ಸಮಿತಿಯಿಂದ ಯೋಗಶಿಬಿರ ಪ್ರಾರಂಭ


 

ಕುಷ್ಟಗಿ :- ಇಂದಿನಿಂದ ಒಂದು ವಾರಗಳ ಕಾಲ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣ,ಬಿ.ಬಿ.ನಗರ ಕುಷ್ಟಗಿಯಲ್ಲಿ ಯೋಗ ಶಿಬಿರ ಪ್ರಾರಂಭವಾಗಿದೆ.

ಪತಂಜಲಿ ಯೋಗ ಸಮಿತಿ ಇನ್ನರ್ ವೀಲ್ ಕ್ಲಬ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದೊಂದಿಗೆ ಇಂಟಿಗ್ರೇಟೆಡ್ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ.

ಉಪಯೋಗಗಳು :- ವಿಶೇಷ ಯೋಗ ಶಿಬಿರದಲ್ಲಿ ದೇಹದ ತೂಕ ಹೆಚ್ಚಿರುವ ವ್ಯಕ್ತಿಗಳು ಒಂದರಿಂದ 3 ಕೆಜಿ ತೂಕ ಇಳಿಸಿಕೊಳ್ಳಬಹುದು ತೂಕ ಕಡಿಮೆ ಇರುವ ವ್ಯಕ್ತಿಗಳು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಯೋಗದಿಂದಾಗಿ ಅಧಿಕ ಬಿಪಿ, ಮಧುಮೇಹ ,ಡಯಾಬಿಟಿಸ್, ಖಿನ್ನತೆ ,ಡಿಫ್ರೆಶನ್ ,ಬೊಜ್ಜು, ಕೊಲೆಸ್ಟ್ರಾಲ್, ತಲೆನೋವು, ಅಲರ್ಜಿ ,ಅಜೀರ್ಣ, ಹಾರ್ಮೋನ್, ಸೇರಿದಂತೆ ಅನೇಕ ತೊಂದರೆಗಳು ನಿವಾರಣೆಯಾಗುತ್ತವೆ.

ಮೊದಲನೇ ದಿನವಾದ ಇಂದು ಯೋಗ ಶಿಬಿರವನ್ನು ಶಿಕ್ಷಕ ಪಂಕಜ್ ಹಾಗೂ ಶರಣಬಸವ ಮಾಟೂರ ಶಿಬಿರ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶರಣಪ್ಪ ಕಾರಟಗಿ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಕೊಪ್ಪಳ ವೀರೇಶ್ ಬಂಗಾರ ಶೆಟ್ಟರ್ ಜಿಲ್ಲಾ ಪ್ರಭಾರಿ ಭಾರತ್ ಸ್ವಾಭಿಮಾನ ಟ್ರಸ್ಟ್ ಕೊಪ್ಪಳ ಸೇರಿದಂತೆ ಹಲವಾರು ಶಿಬಿರಾರ್ಥಿಗಳು ಭಾಗಿಯಾದ್ದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply