ಬೆಳಗಾವಿ ೪- ಯುವ ಬರೆಹಗಾರರು ಸಾಹಿತ್ಯದತ್ತ ಒಲವು ತೋರಿಸುವುದೇ ಅತ್ಯಂತ ವಿರಳ ಇಂತಹ ವಾತಾವರಣದಲ್ಲಿ ಡಾ. ಆನಂದ ಜಕ್ಕಣ್ಣವರ ಮತ್ತು ಶ್ರೀಮತಿ ಅನುರಾಧಾ ಕಂಚಿ ಇವರ ಸಂಪಾದಕತ್ವದಲ್ಲಿಯ ‘ಸಮರಸ’ ಕೃತಿ ತುಂಬ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಯುವ ಲೇಖಕರು ಸಾಹಿತ್ಯದತ್ತ ಗಮನ ಹರಿಸುತ್ತಿಲ್ಲವೆಂಬ ನೋವನ್ನು ಮರೆಸಿದ್ದಾರೆ ಎಂದು ಹಿರಿಯ ಕವಿ ಡಾ. ಜಿನದತ್ತ ದೇಸಾಯಿಯವರು ಇಂದಿಲ್ಲಿ ಹೇಳಿದರು.
ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇವರು ತೃತೀಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಚುಟುಕು ಪ್ರಭೆ’ ಮತ್ತು ‘ಸಮರಸ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದರು ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಜಿನದತ್ತ ದೇಸಾಯಿಯವರು ಮೇಲಿನಂತೆ ಹೇಳಿದರು.
‘ಸಮರಸ’ ಕೃತಿ ಲೋಕಾರ್ಪಣೆ ಮಾಡಿದ ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿಯವರು ಮಾತನಾಡಿ ಇಂದಿನ ಯಾಂತ್ರಿಕ ಜೀವನದಲ್ಲಿ ಆಕಾಶ, ನಕ್ಷತ್ರ, ನಿಸರ್ಗದ ಸೌಂದರ್ಯವನ್ನು ನೋಡುವ, ನೋಡುವ ನೋಡಿ ಆನಂದಿಸುವ ಮನಸ್ಥಿತಿಯನ್ನು ಮನುಷ್ಯ ಕಳೆದುಕೊಳ್ಳುತ್ತಿದ್ದಾನೆ. ‘ಸಮರಸ’ ಸಂಪಾದನಾ ಕೃತಿಯನ್ನ ಹೊರತಂದಿರುವ ಡಾ. ಆನಂದ ಜಕ್ಕಣ್ಣವರ ಮತ್ತು ಶ್ರೀಮತಿ ಅನುರಾಧಾ ಕಂಚಿ ಇವರ ಸಾಧನೆ ಬಹು ದೊಡ್ಡದು ಎಂದು ಹೇಳಿದರು.
‘ಚುಟುಕು ಪ್ರಭೆ’ ಕೃತಿ ಲೋಕಾರ್ಪಣೆಯನ್ನು ಚುಸಾಪ ರಾಜ್ಯ ಸಂಚಾಲಕರಾದ ಡಾ. ಎಂ.ಜಿ.ಆರ್. ಅರಸ್ ಮಾಡಿದರು. ಕೌಸ್ತುಭ ಪತ್ರಿಕೆ ಸಂಪಾದಕರಾದ ಮೈಸೂರಿನ ಶ್ರೀಮತಿ ರತ್ನಾ ಹಾಲಪ್ಪಗೌಡ, ೩ ನೇ ಚುಟುಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಹಿರಿಯ ಪತ್ರಕರ್ತ ಎಲ್. ಎಸ್ . ಶಾಸ್ತ್ರಿಯವರು ಮಾತನಾಡಿದರು.
ಪಿ. ಬಿ. ಸ್ವಾಮಿ, ಎಂ. ಎ. ಪಾಟೀಲ, ಡಾ. ಆನಂದ ಜಕ್ಕಣ್ಣವರ ಮತ್ತು ಶ್ರೀಮತಿ ಅನುರಾಧಾ ಕಂಚಿ, ಮದನ ಕಣಬೂರ, ಉಪಸ್ಥಿತರಿದ್ದರು. ಶ್ರೀಮತಿ ಸುನಂದಾ ಮುಳೆ ಪ್ರಾರ್ಥಿಸಿದರು. ಶ್ರೀಮತಿ ರಾಜೇಶ್ವರಿ ಹಿರೇಮಠ ನಿರೂಪಿಸಿದರು. ಅಶೋಕ ಮಳಗಲಿ ಸ್ವಾಗತಿಸಿದರು.
Gadi Kannadiga > Local News > ಯುವ ಬರೆಹಗಾರರು ಸಾಹಿತ್ಯದತ್ತ ಒಲವು ತೋರುತ್ತಿದ್ದಾರೆ : ಡಾ. ಜಿನದತ್ತ ದೇಸಾಯಿ
ಯುವ ಬರೆಹಗಾರರು ಸಾಹಿತ್ಯದತ್ತ ಒಲವು ತೋರುತ್ತಿದ್ದಾರೆ : ಡಾ. ಜಿನದತ್ತ ದೇಸಾಯಿ
Suresh04/05/2023
posted on
