This is the title of the web page
This is the title of the web page

Please assign a menu to the primary menu location under menu

Local News

ಸಿದ್ನಾಳ ಗ್ರಾಮದಲ್ಲಿ ನಿಮ್ಮ ಗ್ರಾಮ ನಮ್ಮ‌ ಸೇವೆ ಕಾರ್ಯಕ್ರಮ


ರಾಮದುರ್ಗ: ಖ್ಯಾತ ಉದ್ಯಮಿ, ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕರಾದ ಚಿಕ್ಕರೇವಣ್ಣ ಅವರ ನೇತೃತ್ವದಲ್ಲಿ ಅಭಿಮಾನಿ ಬಳಗದವರು ಗುರುವಾರ (ಆ.25) ರಂದು ನಿಮ್ಮ ಗ್ರಾಮ ನಮ್ಮ‌ ಸೇವೆ ಎಂಬ ಕಾರ್ಯಕ್ರಮವನ್ನು ರಾಮದುರ್ಗ ತಾಲ್ಲೂಕಿನ ಸಿದ್ನಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.

ಈಗಾಗಲೇ ತಾಲ್ಲೂಕಿನಾದ್ಯಂತ ಪ್ರತಿ ದಿನ ಒಂದು ದಿನದ ಕ್ಯಾಂಪ್ ಹಮ್ಮಿಕೊಳ್ಳಲಾಗುತ್ತಿದ್ದು,‌ ಅದೇ ರೀತಿ ಸಿದ್ನಾಳ ಗ್ರಾಮದಲ್ಲಿ ಒಂದು ದಿನದ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಇದೇ ಗ್ರಾಮದ ಜನರಿಗೆ ಈ ಜನಸೇವಾ ಕೇಂದ್ರದಿಂದ ಉಚಿತವಾಗಿ ರೇಷನ್ ಕಾರ್ಡ, ಆಧಾರ ಕಾರ್ಡ, ಉತಾರ ಜೊತೆಗೆ ಸರಕಾರದ ಹಲವಾರು ರೀತಿಯ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿ ಪ್ರಿಂಟೌಟ್ ಕೊಡಲಾಯಿತು. ಲ್ಯಾಮಿನೇಷನ್ ಹಾಗೂ ಝರಾಕ್ಸ್ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಉಚಿತ ಸೇವೆಗಳಾದ ಆನ್ಲೈನ್ ಸೇವೆಗಳು ಹಾಗೂ ಕಛೇರಿ ಕೆಲಸ ಕಾರ್ಯಗಳ ಕುರಿತು ಅಭಿಮಾನಿ ಬಳಗದವರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿದರು.

ಈ ವೇಳೆ ಚಿಕ್ಕರೇವಣ್ಣರವರ ಅಭಿಮಾನಿ ಮಾತನಾಡಿ ರಾಮದುರ್ಗ ತಾಲ್ಲೂಕಿನ ಜನಸಾಮಾನ್ಯರಿಗೆ ಸರ್ಕಾರಿ ಕಛೇರಿಗಳ ಕೆಲಸ ಕಾರ್ಯಗಳು ಸುಗಮವಾಗಲೆಂದು 6 ಉಚಿತ ಜನಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ರಾಮದುರ್ಗ, ಹುಲಕುಂದ, ಕಟಕೋಳ, ಸುರೇಬಾನ, ಬಟಕುರ್ಕಿ ಹಾಗೂ ಹೊಸಕೋಟಿ ಈ ಜನಸೇವಾ ಕೇಂದ್ರಗಳಲ್ಲಿ ಉಚಿತವಾಗಿ ರೇಷನ್ ಕಾರ್ಡ, ಆಧಾರ ಕಾರ್ಡ, ಉತಾರ, ಪಿ. ಎಮ್. ಕಿಸಾನ್ E-KYC, ಇ-ಶ್ರಮ್ ಕಾರ್ಡ, ಹೇಲ್ಥ್ ಕಾರ್ಡ, ಕಾರ್ಮಿಕ ಕಾರ್ಡ ಜೊತೆಗೆ ಸರಕಾರದ ಎಲ್ಲ ರೀತಿಯ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿ ಪ್ರಿಂಟೌಟ್ ಕೊಡಲಾಗುವುದು. ಜೊತೆಗೆ ಲ್ಯಾಮಿನೇಷನ್, ಝರಾಕ್ಸ್ ಕೂಡ ಮಾಡಿಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.


Gadi Kannadiga

Leave a Reply