ಕುಷ್ಟಗಿ ಪಟ್ಟಣದಲ್ಲಿ ನಡೆದ ಯುವ ಕ್ರಾಂತಿ ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿಕೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ದೇಶದಲ್ಲಿ ಇರುವ ನಿರುದ್ಯೋಗ ನಿವಾರಿಸಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದರು,ಹಾಗೂರೈತರ ಆದಾಯ ದ್ವಿಗುಣ ಮಾಡುತ್ತೀವಿ ಅಂದರು.ನಿಮಗೆ 4೦% ಕಮೀಷನ್ ಮಾತ್ರ ನಿಮ್ಮ ಕಣ್ಣಿಗೆ ಕಾಣುತ್ತೆ.ನೀವು ನಿಮಗಮ ಕಳೆದ 9ವರ್ಷದ ಅವಧಿಯಲ್ಲಿ ಏನು ಕಡೆದು ಗುಡ್ಡೆ ಹಾಕಿದ್ದೀರಾ ಬಿಜೆಪಿ ನಾಯಕರೇ ಎಂದು ಪ್ರಶ್ನೆ ಮಾಡಿದರು.
ಸಂವಿಧಾನವನ್ನು ರಕ್ಷಿಸುವ, ಭಾರತವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಭಾರತ ಜೋಡೋ ಯಾತ್ರೆ ಮಾಡಿದ್ದೇವೆ ಅದರ ಜೊತೆಗೆ ಇನ್ನೂ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡುವ ಉದ್ದೇಶ ಕಾಂಗ್ರೇಸ್ ಹೊಂದಿದೆ ಎಂದರು.ನಮ್ಮ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ ಅವರ ಒಂದೆ ಮಾತಿಗೆ ಅವರನ್ನು ಅನರ್ಹಗೊಳಿಸಿದ್ದಾರೆ. ಇದು ಬಿಜೆಪಿ ದುರಾಡಳಿತ,ಅವರ ಕಣ್ಣಿಗೆ ಎಲ್ಲರೂ ಒಂದಾಗಿ ಕಾಣಲ್ಲ. ೪೦% ಕಮೀಷನ್ ಮಾತ್ರ ಅವರಿಗೆ ಕಾಣುತ್ತೆ.
ಮಾಧ್ಯಮಗಳು ಏನಾದರೂ ಮೋದಿಯವರ, ಬಿಜೆಪಿಯವರ ವಿರುದ್ದ ಸುದ್ದಿ ಮಾಡಿದರೆ ಆ ಚಾನಲ್ ರದ್ದು ಮಾಡುತ್ತಾರೆ,ಬಿಜೆಪಿ ಅವರು ಸಂವಿಧಾನದ ಕಗ್ಗೊಲೆ ಮಾಡುತ್ತಿದ್ದಾರೆ. ಬಿಜೆಪಿಯವರು 9 ವರ್ಷದಲ್ಲಿ ಏನು ಕಿತ್ತು ಗುಡ್ಡೆ ಹಾಕಿದ್ದೀರಾ,ವರ್ಷಕ್ಕೆ ಎರಡು ಕೋಟಿ ಕೆಲಸ ಅಂದರೆ ೧೮ ಕೋಟಿ ಕೆಲಸ ಎಲ್ಲಿ ಕೊಟ್ಟಿದ್ದೀರಾ ತೋರಿಸಿ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಎಲ್ಲರಿಗೂ ಒಂದೆ.ನಮ್ಮ ಸರ್ಕಾರ ೧೫೦ ಭರವಸೆಗಳಲ್ಲಿ ೧೪೦ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ.
ಈ ಡೋಂಗಿ ಬಿಜೆಪಿ ೪೦% ಸರ್ಕಾರ ೬೦೦ ರಲ್ಲಿ ೬೦ ಕೂಡ ಮಾಡಿಲ್ಲ.ಭ್ರಷ್ಟ, ನೀಚ ಸರಕಾರ ಎಲ್ಲದಕ್ಕೂ ಜಿಎಸ್ಟಿ ಕಟ್ಟಬೇಕು.ತಾಯಿ ಮಗುವಿಗೆ ಹಾಲು ಕುಡಿಸಬೇಕೆಂದರೆ ೫% ಜಿಎಸ್ಟಿ ಕಟ್ಟಬೇಕು.ಇದೆಂಥ ಸರ್ಕಾರ ನೀವೇ ಯೋಚಿಸಿ ಎಂದು ಕಾಂಗ್ರೇಸ್ ಕಾರ್ಯಕರ್ತರಿಗೆ ಹೇಳಿದರು.
ವಿರೋಧ ಪಕ್ಷದಲ್ಲಿದ್ದರೂ ಬಯ್ಯಾಪುರ ಅವರು ೧೫೦೦ಕೋಟಿ ಅನುದಾನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.ಹಾಗಾಗಿ ನಾವು ಯಾರೂ ಹೆದರುವ ಅವಶ್ಯಕತೆ ಇಲ್ಲ,ನುಡಿದಂತೆ ನಡೆದ ಸರಕಾರ ನಮ್ಮ ಕಾಂಗ್ರೆಸ್ ಪಕ್ಷ ,ಕಾಂಗ್ರೇಸ್ ಘೋಷಣೆ ಮಾಡಿರುವ ಗ್ಯಾರಂಟಿ ಕಾರ್ಡನ ಭರವಸೆ ಈಡೇರಿಸಲು ನಮ್ಮ ಅಭ್ಯರ್ಥಿಗೆ ಗೆಲ್ಲಿಸಿ ಎಂದರು.
ಸರ್ವ ಸಮುದಾಯದ ಅಭಿವೃದ್ಧಿ ಹೊಂದಲು ಕಾಂಗ್ರೆಸ ಸರಕಾರಕ್ಕೆ ಅಧಿಕಾರ ಕೊಡಿ.ಮತ್ತು ಕುಷ್ಟಗಿ ಕ್ಷೇತ್ರದಲ್ಲಿ ಅಮರೇಗೌಡ ಬಯ್ಯಾಪುರ ಗೆಲ್ಲಿಸಿ ಎಂದು
ಮಹಮ್ಮದ್ ನಲಪಾಡ ಕ್ಷೇತ್ರದ ಜನತೆಗೆ ಮನವಿ ಮಾಡಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ