ಪಣಜಿ: ಕರ್ನಾಟಕದ ಗಡಿ ಭಾಗದಲ್ಲಿರುವ ಗೋವಾದ ತಿಳಾರಿ ಜಲಪಾತದಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಹಾರ್ದಿಕ್ ಪ್ರವೀಣ ಪರಮಾರ (22) ಜಲಪಾತದಲ್ಲಿ ಮುಳುಗಿ ಸಾವ್ನಪ್ಪಿದ ವಿದ್ಯಾರ್ಥಿಯಾಗಿದ್ದಾನೆ. ಈತ ಎಸ್ಜಿ ಬಾಳೆಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ರಜಾ ದಿನದ ಹಿನ್ನೆಲೆಯಲ್ಲಿ ಮಿತ್ರರೊಂದಿಗೆ ಈತ ತಿಳಾರಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದ. ಆದರೆ ಜಲಪಾತದ ಆಳದ ಅರಿವಿಲ್ಲದೆಯೇ ಈಜಲು ಕೆಳಕ್ಕಿಳಿದಾಗ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.