This is the title of the web page
This is the title of the web page

Please assign a menu to the primary menu location under menu

Local News

ಯುವಜನೋತ್ಸವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೌಧ್ಧಿಕಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ: ಪ್ರೊ. ಎಂ ರಾಮಚಂದ್ರಗೌq


ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎನ್.ಎಸ್.ಎಸ್. ಕೋಶದ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಯುವಜನೋತ್ಸವದ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಮ್ ರಾಮಚಂದ್ರಗೌಡ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕುಲಪತಿಗಳಾದ ಪ್ರೊ. ಎಮ್ ರಾಮಚಂದ್ರಗೌಡ ಅವರು ನಾವೆಲ್ಲ ಸ್ವಯಂಸೇವಕರಾಗಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರಿಂದ ನಿಸ್ವಾರ್ಧ ಭಾವನೆ, ದೇಶ ಪ್ರೇಮ ಹಾಗೂ ಕೌಶಲ್ಯ ಅಭಿವೃಧಿಗೆ ಸಹಾಯವಾಗುತ್ತದೆ ಎಂದರು. ಎಂದರು. ಯುವಜನೋತ್ಸವವು ಏಲ್ಲರಲ್ಲಿ ಭಾತೃತ್ವ ಭಾವನೆ ಬೆಳಸಿ ರಾಷ್ಟ್ರದ ಸಂಸ್ಕ್ರತಿಯನ್ನು ಅರಿತು ಉತ್ತಮ ಜೀವನ ನಡೆಸಲು ಸಹಾಯಕವಾಗುತ್ತದೆ ಎಂದರು. ಯುವಜನೋತ್ಸವದ ಉದ್ಘಾಟನೆಯನ್ನು ರಾಜ್ಯ ಎನ್.ಎಸ್.ಎಸ್ ಅಧಿಕಾರಿಗಳಾದ ಶ್ರೀ. ಪ್ರತಾಪ ಲಿಂಗಯ್ಯ ಅವರು ಮಾತನಾಡಿ ರಾಜ್ಯದಲ್ಲಿನ ಎಲ್ಲ ಎನ್.ಎಸ್.ಎಸ್ ಸ್ವಯಂ ಸೇವಕರು ತುಂಬಾ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ ಈ ದೇಶದಲ್ಲಿಯೆ ಕರ್ನಾಟಕ ರಾಜ್ಯವು ಮಾದರಿಯಾಗಿದೆ ಎಂದು ಹೇಳಿದರು. ನೈತಿಕವಾದ ಚಾರಿತ್ರö್ಯ ಹಾಗೂ ಶಿಸ್ತುಬದ್ಧ ಜೀವನವಿದಲ್ಲಿ ಮಾತ್ರ ಒಬ್ಬ ಉತ್ತಮ ನಾಯಕನಾಗಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊ. ಶಂಭು ಬಳಿಗಾರ ನಾಡಿನ ಖ್ಯಾತ ಜಾನಪದ ಸಾಹಿತಿಗಳು ಮಾತನಾಡಿ ವಿದ್ಯಾಥಿಗಳು ಎನ್.ಎಸ್.ಎಸ್ ಸ್ವಯಂ ಸೇವಕರಾಗಿ ನಿಸ್ವಾರ್ಥತೆಯಿಂದ ಕಲಿತು ಪ್ರತಿ ಹಳ್ಳಿಯಲ್ಲಿ ಸ್ವಯಂ ಸೇವಕರನ್ನು ತಯಾರ ಮಾಡಬೇಕು ಹಾಗೂ ಸಮಾಜದ ಒಳಿತಿಗಾಗಿ ಹುಮ್ಮಸ್ಸಿನಿಂದ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಗೌರವಾನ್ವಿತ ಅತಿಥಿಗಳಾಗಿ ಶ್ರೀ. ಕೆ. ಕುಮಾರವೇಲ ಹಿಂಡಾಲ್ಕೋ ಇಂಡಸ್ಟ್ರಿಸ್ ಲಿ., ನ ಜಂಟಿ ಅಧ್ಯಕ್ಷರು ಮತ್ತು ಘಟಕ ಮುಖ್ಯಸ್ಥರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸ್ವಯಂ ಸೇವೆ ಅತ್ಯಂತ ಅವಶ್ಯಕ ಮತ್ತು ಪಠ್ಯಕ್ರಮದಲ್ಲಿ ಎನ್.ಎಸ್.ಎಸ್. ನ ಅಳವಡಿಕೆ ಆಗಲಿ ಎಂದು ತಿಳಿಸಿದರು. ಎನ್.ಎಸ್.ಎಸ್. ದಲ್ಲಿ ಭಾಗವಹಿಸುವದರಿಂದ ಸಾಂಸ್ಕೃತಿಕ ನೈತಿಕ ಸೇವಾ ಪ್ರವೃತಿ ಬೆಳೆಯುತ್ತದೆ ಎಂದು ಹೇಳಿದರು.
ಪ್ರೊ. ಬಿ.ಎಸ್.ನಾವಿ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳು ರಾ.ಚ.ವಿ ಬೆಳಗಾವಿ ಇವರು ಕಾರ್ಯಕ್ರಮದ ಗಣ್ಯ ಮಾನ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ. ಶ್ರೀಮಂತ ಮಾದರ ಹಾಗೂ ಶ್ರೀ. ಮಹಾಭಳೇಶ್ವರ ಸಾಬಣ್ಣವರ ಎನ್.ಎಸ್.ಎಸ್ ಗೀತೆ ಹಾಗೂ ನಾಡ ಗೀತೆಯನ್ನು ಹಾಡಿದರು. ಡಾ. ಪಿ. ನಾಗರಾಜ ವಂದನಾರ್ಪಣೆಯನ್ನು ನೇರವೆರಿಸಿದರು. ಮತ್ತು ಕುಮಾರಿ. ಮಂಜುಳಾ ಕಾರ್ಯಕ್ರಮವನ್ನು ನಿರೂಪಿದರು. ರಾಜ್ಯದ ೨೦ ವಿಶ್ವವಿದ್ಯಾಲಯಗಳ ಕಾರ್ಯಕ್ರಮ ಅಧಿಕಾರಿಗಳು ಹಾಗೂ ೨೫೦ ಸ್ವಯಂ ಸೇವಕರು ಉಪಸ್ಥಿತರಿದ್ದರು.


Gadi Kannadiga

Leave a Reply