This is the title of the web page
This is the title of the web page

Please assign a menu to the primary menu location under menu

State

ಮಾರ್ಚ್ 3 ಕ್ಕೆ ಯಲಬುರ್ಗಾದಲ್ಲಿ ಜೀ ಕನ್ನಡದ “ ಹಿಟ್ಲರ್ ಕಲ್ಯಾಣ ಜಾತ್ರೆ


ಕೊಪ್ಪಳ:-ಸತತ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡುತ್ತಿರುವ ಜೀ ಕನ್ನಡ ವಾಹಿನಿ ತನ್ನ ಶ್ರೀಮಂತ ನಿರೂಪಣೆಯ ಮೂಲಕ ಕಿರುತೆರೆಯಲ್ಲೇ ಹೊಸ ಅಧ್ಯಾಯ ಬರೆದಿದೆ. ಅದರ ಮುಂದುವರೆದ ಭಾಗವಾಗಿ ಆರಂಭವಾದ ” ಹಿಟ್ಲರ್ ಕಲ್ಯಾಣ ” ಸೀರಿಯಲ್ ಲೋಕದಲ್ಲೇ ಹೊಸತನವನ್ನು ತಂದಿದೆ.
ಪರ್ಫೆಕ್ಟ್ ರಾಜ ಎಜೆ ಪಾತ್ರದಲ್ಲಿ ನಟ ದಿಲೀಪ್ ರಾಜ್ , ಎಡವಟ್ ರಾಣಿ ಲೀಲಾ ಪಾತ್ರದಲ್ಲಿ ಮಲೈಕಾ ತಮ್ಮ ಅದ್ಭುತ ಅಭಿನಯದ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ಮೂವರು ಸೊಸೆಯಂದಿರು ಸೇರಿ ಅತ್ತೆಯನ್ನು ಹುಡುಕುವ ವಿಭಿನ್ನ ಕಥೆಯನ್ನು ವಿನೂತನವಾಗಿ ನಿರೂಪಣೆ ಮಾಡುತ್ತಿರುವುದು ಈ ಸೀರಿಯಲ್ ನ ಜನಪ್ರಿಯತೆ ಹೆಚ್ಚಿಸಿದೆ. 200 ಸಂಚಿಕೆಗಳ ಸನಿಹದಲ್ಲಿರುವ ಈ ಧಾರವಾಹಿ ಪ್ರೀತಿಯಿಂದ ಪ್ರೋತ್ಸಾಹಿಸಿದ ಜನರ ಬಳಿಗೆ ಬಂದು ಅವರೊಟ್ಟಿಗೆ ಬೆರೆತು ಧನ್ಯವಾದ ತಿಳಿಸಲೆಂದು ಇಡೀ ಹಿಟ್ಲರ್ ಕಲ್ಯಾಣ ತಂಡ ಪಾರು ಧಾರಾವಾಹಿಯ ನಾಯಕ, ನಾಯಕಿಯೊಟ್ಟಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗದ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದು ” ಹಿಟ್ಲರ್ ಕಲ್ಯಾಣ ಜಾತ್ರೆ ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೀ ಕನ್ನಡ ವಾಹಿನಿ ನಿಮ್ಮೂರಿನಲ್ಲಿ ನಿಮಗೆಂದೇ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ. ಮಾರ್ಚ್ 3 ಸಂಜೆ 5.30 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply