ಕುಷ್ಟಗಿ:-ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಹಾಗೂ ಸರ್ಕಾರ ದೌರ್ಜನ್ಯ ಖಂಡಿಸಿ ತಾವರಗೇರಾ ಪಟ್ಟಣದ ಕಿತ್ತೂರರಾಣಿ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನಾ ಕಾರರು ಸರಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ವೀರಭದ್ರಪ್ಪ ನಾಲತವಾಡ, ಶೇಖರಗೌಡ ಪಾಟೀಲ್, ಶಿವರಾಜಗೌಡ ಪೊಲೀಸ್ ಪಾಟೀಲ್, ಪಪಂ ಸದಸ್ಯರಾದ ಬಸನಗೌಡ ಓಲಿ, ಮಂಜುನಾಥ ಜೂಲಕುಂಟಿ, ಪಂಚಸೇನೆ ತಾಲೂಕಾ ಅಧ್ಯಕ್ಷ ವಿರೇಶ ನಾಲತವಾಡ, ಆದೇಶ ಜಕಾಪೂರು, ರಮೇಶ ತಿಮ್ಮಾಪೂರು, ಚನ್ನಪ್ಪ ನಾಲತವಾಡ, ವಿಜಯಕುಮಾರ ಸಾಸ್ವಿಹಾಳ ಸೇರದಿಂತೆ ನೂರಾರು ಯುವಕರು ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಪಿಎಸ್ ಐ ನಾಗರಾಜ ಕೊಟಗಿ ನೇತೃವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಿಧ ತಾವರಗೇರಾ ಪಟ್ಟಣದ ಕಿತ್ತೂರರಾಣಿ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು. ನಂತರ ನಾಡ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ