ಮುದಗಲ್:-ಅಗಸ್ಟ್ 9 2025 ರಂದು ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠದ ಶ್ರೀ ಶ್ರೀ ಪರಮಪೂಜ್ಯ ಶ್ರೀ ವೀರಭದ್ರ ಮಹಾಸ್ವಾಮಿಗಳು ಹಾಗೂ ಶ್ರೀಮಠದ ಕುಟುಂಬಸ್ಥರು ವಿಜಯನಗರ ಜಿಲ್ಲೆ ಹಂಪಿಯಲ್ಲಿ ನೂಲ ಹುಣ್ಣಿಮೆಯ ದಿನದಂದು ಹಂಪಿಯ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.ನಂತರ ಪೂಜ್ಯರ ಮನೆಯ ದೇವರಾದ ಹಂಪಿಯ ವಿರುಪಾಕ್ಷೇಶ್ವರನಿಗೆ ಅಭಿಷೇಕ ಮಹಾ ಮಂಗಳಾರತಿ ಮಾಡಿಸಿ,ಕುಟುಂಬಸ್ಥರು ವಿರುಪಾಕ್ಷೇಶ್ವರನ ದರ್ಶನ ಮಾಡಿದರು.ಈ ಸಂದರ್ಭದಲ್ಲಿ ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು,ಡಾ.ಬಸವರಾಜ ಮಹಾಸ್ವಾಮಿಗಳು ,ಮಾತೋಶ್ರೀಗಳಾದ ಅಮ್ಮನವರು ಹಾಗೂ ವಿವಿಧ ಭಾಗದಿಂದ ಹಲವಾರು ಭಕ್ತರು ಆಗಮಿಸಿ ವಿರುಪಾಕ್ಷೇಶ್ವರನ ಹಾಗೂ ಅಂಕಲಿಮಠ ದ ಪೂಜ್ಯರುಗಳ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ