ಕೊಪ್ಪಳ ಮೇ ೧೫: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಿಂದ ಉಚಿತ ಕೌಶಲ್ಯಾಧಾರಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
೧೮ ರಿಂದ ೪೫ ವಯೋಮಾನದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಜೂನ್ ತಿಂಗಳಲ್ಲಿ ಬ್ಯೂಟಿ ಪಾರ್ಲರ್ ತರಬೇತಿ, ಜೂಟ್ ಬ್ಯಾಗ್ ತಯಾರಿಕೆ ಮತ್ತು ಫೋಟೋಗ್ರಾಫಿ & ವಿಡಿಯೋಗ್ರಾಫಿ ಉಚಿತ ತರಬೇತಿಗಳು ಆರಂಭವಾಗಲಿದ್ದು, ತರಬೇತಿ ಅವಧಿಯಲ್ಲಿ ಊಟ ಹಾಗೂ ವಸತಿಯು ಉಚಿತವಾಗಿರುತ್ತದೆ.
ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸಗಳನ್ನು ನೋಂದಾಯಿಸಲು ಮೇ ೨೦ ಕೊನೆಯ ದಿನವಾಗಿದ್ದು, ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿಂಗ್ ನಿಂದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನೇತರ ಮಾಹಿತಿಯನ್ನು ಉಚಿತವಾಗಿ ನೀಡಲಾಗುವುದು.
ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ, ದೂ.ಸಂ : ೯೪೮೨೧೮೮೭೮೦, ೯೪೮೩೪೮೫೪೮೯, ೮೯೭೦೧೪೫೩೫೪, ೯೭೪೨೪೩೮೭೯೦, ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Gadi Kannadiga > State > ಉಚಿತ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಉಚಿತ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ
Suresh15/05/2023
posted on
More important news
ಪ್ರತಿಬಂಧಕಾಜ್ಞೆ ಜಾರಿ
08/06/2023