ಪರಿಸರ ಸಂರಕ್ಷಣೆ ಮಾಡುವುದು ಮಾನವನ ಕರ್ತವ್ಯ-ಬಸವರಾಜ ಪಾಟೀಲ್ ಹೇಳಿಕೆ

Gadi Kannadiga
ಪರಿಸರ ಸಂರಕ್ಷಣೆ ಮಾಡುವುದು ಮಾನವನ ಕರ್ತವ್ಯ-ಬಸವರಾಜ ಪಾಟೀಲ್ ಹೇಳಿಕೆ
WhatsApp Group Join Now

ಕುಷ್ಟಗಿ:-ಬೆಳೆಕು ಕೊಡುವ ಸೂರ್ಯ ಚಂದ್ರ ಎಷ್ಟು ಮುಖ್ಯವೋ ಅಷ್ಟೆ ನಮ್ಮ ಪರಿಸರನ್ನು ಕಾಪಾಡುವದು ಮಾನವನ ಕರ್ತವ್ಯವಾಗಿದೆ ಮತ್ತು ಪರಿಸರವನ್ನು ಉಳಿಸಬೇಕು ಮತ್ತು ಬೆಳಸಬೇಕು ಎಂದು ಹಿಂದು ಮಾಹಾ ಮಂಡಲದ ಗೌರವ ಅದ್ಯಕ್ಷ ಬಸವರಾಜ ಪಾಟೀಲ ಹೇಳಿದರು.

ಪರಿಸರ ನಮ್ಮ ರಕ್ಷಣೆಗಾಗಿ ಇದೇ ಪರಿಸರವನ್ನು ನಾವುಗಳು ನಾಶ ಮಾಡುತ್ತಿದ್ದೇವೆ ಈ ಪ್ರಕೃತಿ ನಮಗೆ ಉಸಿರು ಕೊಡುತ್ತದೆ ಬದಕಲು ಬದುಕನ್ನು ಕೊಡುತ್ತದೆ ಆದ್ದರಿಂದ ನಮ್ಮ ಪರಿಸರವನ್ನು ನಾವುಗಳೇ ರಕ್ಷಣೆ ಮಾಡಬೇಕು ಎಂದರು.

ಸುವರ್ಣ ಕರ್ನಾಟಕ ಸೂರ್ಯವಂಶ ಕ್ಷೇತ್ರಿಯ ಕಲಾಲ್ ಸಮಾಜ ರಾಜ್ಯ ಘಟಕ ಬೆಂಗಳೂರು ಹಾಗೂ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ತಾಲೂಕು ಘಟಕ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹೋರಾಟಗಾರ ಹಾಗೂ ಸಮಾಜ ಸೇವಕ ಪ್ರವೀಣಜಿ ಕಲಾಲ್ ಇವರ ಹುಟ್ಟು ಹಬ್ಬದ ಪ್ರಯುಕ್ತ ಇಲ್ಲಿನ ಜನಿವಾರ ಸಮಾಜದ ರುದ್ರಭೂಮಿಯಲ್ಲಿ ಸಸಿಗೆ ನೀರು ಹಾಕುವ ಮೂಲಕ ಸಸಿಯನ್ನು ನೆಟ್ಟು ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ವೀರೇಶ ಲೆಕ್ಕಿಹಾಳ, ಮಲ್ಲಿಕಾರ್ಜುನ ಗುಗ್ರಿ, ಪ್ರಪುಲ್, ನವೀನ, ಅರುಣ, ಸುದೀಪ್, ಅಭಿ ಕೇಸೂರ, ಭಗತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!