ವ್ಯಾಕರನಾಳ ಗ್ರಾಮಸ್ಥರಿಂದ ಅಂಕಲಿಮಠ ಕಿರಿಯ ಪೂಜ್ಯರಿಗೆ ಗೌರವ ಸನ್ಮಾನ

Gadi Kannadiga
ವ್ಯಾಕರನಾಳ ಗ್ರಾಮಸ್ಥರಿಂದ ಅಂಕಲಿಮಠ ಕಿರಿಯ ಪೂಜ್ಯರಿಗೆ ಗೌರವ  ಸನ್ಮಾನ
WhatsApp Group Join Now

ಮುದಗಲ್ :- 26- ಜುಲೈ-2025 ರಂದು ತಮಿಳುನಾಡಿನ ರಾಜ್ಯದ ಹೊಸೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಅಮೆರಿಕನ್ ವಿಸ್ಡಮ್ ಪೀಸ್ ಯುನಿವರ್ಸಿಟಿ ಹಾಗೂ ತಮಿಳುನಾಡಿನ ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಅಕಾಡೆಮಿ ರವರು, ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠದ ಕಿರಿಯ ಶ್ರೀಗಳಾದ ಶ್ರೀ ಪರಮಪೂಜ್ಯ ಶ್ರೀ ಬಸವರಾಜ ಮಹಾಸ್ವಾಮಿಗಳು ಅವರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿದ್ದರು. ಈ ಸಂದರ್ಭದಲ್ಲಿ ಅಮೇರಿಕಾ ವಿಸ್ಡಮ್ ಪೀಸ್ ಯುನಿವರ್ಸಿಟಿ ಹಾಗೂ ತಮಿಳುನಾಡಿನ ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ಸ್ ರಿಸರ್ಚ್ ಅಕಾಡೆಮಿಯ ಸಹಯೋಗದೊಂದಿಗೆ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದರು.ಅದರ ಪ್ರಯುಕ್ತ ಇಂದು ದಿನಾಂಕ:-02-08-2025 ಶನಿವಾರ ದಂದು ಲಿಂಗಸಗೂರು ತಾಲೂಕಿನ ವ್ಯಾಕರನಾಳ ಗ್ರಾಮದ ಶಶಿಧರ್ ಗೌಡ ಮೇಟಿ, ಭೀಮನಗೌಡ ಪೊಲೀಸ ಗೌಡ,ವೀರೇಶ್ ಯಡಿವಾಳ,ಮಂಜುನಾಥ್, ಮುರ್ತುಜಸಾಬ, ಸುಭಾಸ್ ಜುಮಲಾಪೂರ ,ಪ್ರಕಾಶ್ ಮಡಿವಾಳ,ಆಕಾಶ, ಸೇರಿದಂತೆ ಇನ್ನಿತರರು ಇಂದು ಅಂಕಲಿಮಠ ಕ್ಕೆ ಆಗಮಿಸಿ ಕಿರಿಯ ಶ್ರೀಗಳಾದ ಶ್ರೀ ಪರಮಪೂಜ್ಯ ಡಾllಶ್ರೀ ಬಸವರಾಜ ಮಹಾಸ್ವಾಮಿಗಳು ಅವರಿಗೆ ಗೌರವಿಸಿ ಸತ್ಕರಿಸಿದರು.ನಂತರ ಪೂಜ್ಯರಿಂದ ಆಶೀರ್ವಾದ ಪಡೆದುಕೊಂಡರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ

WhatsApp Group Join Now
Telegram Group Join Now
Share This Article
error: Content is protected !!