ಬಿಸಿಯೂಟದ ವ್ಯವಸ್ಥೆಯನ್ನು ಸರ್ಕಾರೇತರ ಸಂಸ್ಥೆಗೆ ವಹಿಸುವದರ ಮೂಲಕ ಮುಖ್ಯಗುರುಗಳ ಮೇಲೆ ಇರುವ ಮಾನಸಿಕ ಒತ್ತಡ,ಹಾಕದಂತೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ರವರಿಗೆ ಮನವಿ ಸಲ್ಲಿಸಿದ ಶಿಕ್ಷಕರು

Gadi Kannadiga
ಬಿಸಿಯೂಟದ ವ್ಯವಸ್ಥೆಯನ್ನು ಸರ್ಕಾರೇತರ ಸಂಸ್ಥೆಗೆ ವಹಿಸುವದರ ಮೂಲಕ ಮುಖ್ಯಗುರುಗಳ ಮೇಲೆ ಇರುವ ಮಾನಸಿಕ ಒತ್ತಡ,ಹಾಕದಂತೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ರವರಿಗೆ ಮನವಿ ಸಲ್ಲಿಸಿದ ಶಿಕ್ಷಕರು
WhatsApp Group Join Now

ಕುಷ್ಟಗಿ: ಇಂದು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರು ಜೊತೆಗೂಡಿ ಮಾನ್ಯ ಮಾಜಿ ಶಾಸಕರು ಶ್ರೀ ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ಬಿಸಿಯೂಟದ ವ್ಯವಸ್ಥೆಯನ್ನು ಸರ್ಕಾರೇತರ ಸಂಸ್ಥೆಗೆ ವಹಿಸುವದರ ಮೂಲಕ ಮುಖ್ಯಗುರುಗಳ ಮೇಲೆ ಇರುವ ಮಾನಸಿಕ ಒತ್ತಡ,ಭಾರವನ್ನು ಕಡಿಮೆ ಮಾಡಿ ಶಾಲಾ ಕೊಠಡಿಯಲ್ಲಿ ಉತ್ತಮವಾದ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ನಮಗೆಲ್ಲಾ ಅನುವು ಮಾಡಿಕೊಡಬೇಕೆಂದು ಹಾಗೂ ಶಿಕ್ಷಕರ ಪತ್ತಿನ ಸಂಘದಲ್ಲಿ ಆಗಿರುವ ದೋಷಗಳನ್ನು ಜಿಲ್ಲಾ ಅಧಿಕಾರಿಗಳಿಂದ ಪರಿಹರಿಸಿ ನಮಗೆ ಸಿಗಬೇಕಾದ ನ್ಯಾಯವನ್ನು ದೊರಕಿಸಿ ಕೊಡಿ ಎಂದು ಮನವಿಯನ್ನು ಸಲ್ಲಿಸಲಾಯಿತು.

ಮನವಿಯನ್ನು ಆಲಿಸಿದ ಮಾಜಿ ಶಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ,ಬಿಸಿಯೂಟದ ವ್ಯವಸ್ಥೆಯನ್ನು NGO ಗೆ ಕೊಡಲು ಜಿಲ್ಲಾ ಹಂತದ ಅಧಿಕಾರಿಗಳಿಗೆ ಹಾಗೂ ಸರ್ಕಾರದ ಮಟ್ಟದ ಗಮನಕ್ಕೆ ತರುವುದಾಗಿ ಹಾಗೂ ಪತ್ತಿನ ಸಂಘದ ಸಮಸ್ಯೆಯನ್ನು ಕೂಡಾ ಬಗೆ ಹರಿಸಲು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಶಿಕ್ಷಕರಿಗೆ ನ್ಯಾಯವನ್ನು ಒದಗಿಸಿ ಕೊಡುವ ಬರವಸೆಯನ್ನು ನೀಡಿದರು, ಹಾಗೂ ಇಂದೇ ಕೊಪ್ಪಳದಲ್ಲಿ ಸಂಬಂಧ ಪಟ್ಟವರ ಜೊತೆ ಮಾತನಾಡುತ್ತೇನೆ ಎಂಬ ಧನಾತ್ಮಕ ಅಂಶಗಳನ್ನು ತಿಳಿಸಿದರು,

ಈ ಸಂದರ್ಭದಲ್ಲಿ ಹಾಜರಿದ್ದ ನೌಕರರ ಸಂಘ, ಶಿಕ್ಷಣಾಧಿಕಾರಿಗಳ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘ,ಪದವೀಧರ ಶಿಕ್ಷಕರ ಸಂಘ, NPS ನೌಕರರ ಸಂಘ, CRP/BRP ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳ ಮುಖ್ಯಗುರುಗಳು ಸಹ ಶಿಕ್ಷಕರ ಪರವಾಗಿ ಮಾನ್ಯರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸಿದರು.
ಹಾಗೂ ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲಾ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮುಖ್ಯ ಗುರುಗಳಿಗೆ, ಸಹ ಶಿಕ್ಷಕರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!