ರಾಯಚೂರಿಗೆ ಏಮ್ಸ್ (AIIMS) ನೀಡುವಂತೆ ಎಚ್ ಶಿವರಾಮೇಗೌಡರ ರಕ್ಷಣಾ ವೇದಿಕೆ ಕೇಂದ್ರ ಸರ್ಕಾರಕ್ಕೆ ಒತ್ತಾಯ

Gadi Kannadiga
ರಾಯಚೂರಿಗೆ  ಏಮ್ಸ್ (AIIMS) ನೀಡುವಂತೆ ಎಚ್ ಶಿವರಾಮೇಗೌಡರ ರಕ್ಷಣಾ ವೇದಿಕೆ ಕೇಂದ್ರ ಸರ್ಕಾರಕ್ಕೆ ಒತ್ತಾಯ
WhatsApp Group Join Now

ಕುಷ್ಟಗಿ:-ಕರ್ನಾಟಕ ರಕ್ಷಣಾ ವೇದಿಕೆ (ಎಚ್ ಶಿವರಾಮೇಗೌಡ ಬಣದ ಕಾರ್ಯಕರ್ತರು ದಿನಾಂಕ 6-7-24 ರಂದು ತಾಲೂಕ ದಂಡಾಧಿಕಾರಿಗಳು ಕುಷ್ಟಗಿ ರವರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಈ ಹಿಂದೆ ಪ್ರಧಾನಿ ಜೀ ರವರು ಘೋಷಿಸಿದಂತೆ ಈ ದೇಶದಲ್ಲಿ 112 ಮಹತ್ವಕಾಂಕ್ಷಿ ಜಿಲ್ಲೆಗಳಲ್ಲಿ, ಕರ್ನಾಟಕ ರಾಜ್ಯದ ಅದು ಕಲ್ಯಾಣ ಕರ್ನಾಟಕದ, ರಾಯಚೂರು ಮತ್ತು ಯಾದಗಿರಿ ಜಿಲ್ಲೆ, ಇವೆರಡೇ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಯ ಅಡಿಯಲ್ಲಿ ಬರುತ್ತವೆ. ಕಳೆದ 76 ವರ್ಷಗಳಿಂದ ಅಂದರೆ ಸ್ವಾತಂತ್ರ ಬಂದ ನಂತರ, ಇಂದಿಗೂ ರಾಯಚೂರು ಜಿಲ್ಲೆಗೆ ಯಾವುದೇ ಮಹತ್ವಕಾಂಕ್ಷಿ ಯೋಜನೆ ಜಾರಿಯಾಗಿಲ್ಲ. ರಾಯಚೂರು ಜಿಲ್ಲೆಯು ಬಹಳ ಹಿಂದುಳಿದ ಜಿಲ್ಲೆ, ಹಾಗೂ ಹಲವು ರೋಗಗಳ ಜಿಲ್ಲೆ ಅಂದರು ತಪ್ಪಾಗಲಿಕ್ಕಿಲ್ಲ. ಕರ್ನಾಟಕ ರಾಜ್ಯ ಸರ್ಕಾರವು ಪ್ರಾದೇಶಿಕ ಅಸಮತೋಲನತೆಯನ್ನು ಹೋಗಲಾಡಿಸಲು, ನಂಜುಂಡಪ್ಪ ಆಯೋಗವನ್ನು ರಚಿಸಲಾಯಿತು. ನಂಜುಂಡಪ್ಪನವರ ವರದಿಯಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಬೇಡಿಕೆಯಂತೆ, ರಾಯಚೂರು ಜಿಲ್ಲೆಗೆ ಐಐಟಿಯನ್ನು ಕೊಡಬೇಕೆಂದು ತಿಳಿಸಲಾಗಿತ್ತು. ಆದರೆ ರಾಯಚೂರಿನಲ್ಲಿ ಐ ಐ ಟಿ ಹೋರಾಟ ಸಮಿತಿಯನ್ನು ಒಳಗೊಂಡು ಹಲವು ಸಂಘ ಸಂಸ್ಥೆಗಳು ಕೂಡ ಐ ಐ ಟಿ ಯನ್ನು ಪಡೆಯಲು ಬಹಳ ಗಂಭೀರವಾದ ಹೋರಾಟ ಮಾಡಿದರು. ಆದರೆ ಐ ಐ ಟಿ ಮೋಸದಿಂದ, ಧಾರವಾಡದ ಪ್ರಭಲ ರಾಜಕೀಯ ಪ್ರಭಾವದಿಂದ, ಐ ಐ ಟಿ ಯನ್ನು ಧಾರವಾಡಕ್ಕೆ ಕಸಿದುಕೊಳ್ಳಲಾಯಿತು. ಆ ಸಮಯದಲ್ಲಿ ನಮಗೆ ಸಮಾಧಾನಿಸಲು, ರಾಯಚೂರಿಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು (AIIMS) ಆಗಿನ ರಾಜ್ಯ ಸರ್ಕಾರವು, ಭರವಸೆಯನ್ನು ನೀಡಲಾಗಿತ್ತು. ಕರ್ನಾಟಕ ರಾಜ್ಯಕ್ಕೆ ಒಂದು ಭಾರತೀಯ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (AIIMS) ನೀಡಲಾಗುವುದೆಂದು ತಮ್ಮ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಮತ್ತೆ ಅದೇ ಧಾರವಾಡದ ಪ್ರಭಲ ರಾಜಕಾರಣಿಗಳ ಕುತಂತ್ರಕ್ಕೆ, ಏಮ್ಸ್ ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಹುನ್ನಾರ ಮಾಡಲಾಗಿದೆ .ಈ ವಿಷಯ ತಮ್ಮ ಗಮನಕ್ಕಿರಲಿ. ಅದಲ್ಲದೆ ಸುಮಾರು 26 ತಿಂಗಳಿಂದ (780 ದಿನಗಳಿಂದ) ತಿಂಗಳಿಂದ ಅಂದರೆ ಎರಡು ವರ್ಷಗಳ ಮೇಲ್ಪಟ್ಟು ರಾಯಚೂರಿನಲ್ಲಿ,ಏಮ್ಸ್ (AIIMS) ಹೋರಾಟ ಸಮಿತಿಯಿಂದ ಹಾಗೂ ಹಲವೂ ಸಂಘ ಸಂಸ್ಥೆಗಳ, ವ್ಯಾಪಾರ ಸಂಸ್ಥೆಗಳು, ಜಾತಿ ಸಂಘಗಳ ಬೆಂಬಲದಿಂದ ನಿರಂತರ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮುಂದುವರೆದಿದೆ. ನ್ಯಾಯುತವಾಗಿ ಮಹತ್ವದ ಒಂದು ಆರೋಗ್ಯ ಸಂಸ್ಥೆಯನ್ನು ಪಡೆಯಲು ಎರಡು ವರ್ಷಗಳ ಕಾಲ, 26 ತಿಂಗಳಿಂದ ((780 ದಿನಗಳಿಂದ) ಹೋರಾಟ ಮಾಡಬೇಕಾಗುತ್ತದೆಯೇ ?ಇದು ಪ್ರಧಾನಿಯವರು ಗಂಭೀರವಾಗಿ ಆಲೋಚಿಸಬೇಕಾಗಿದೆ!? ರಾಯಚೂರಿಗೆ ಏಮ್ಸ್ ಕೊಡಬೇಕೆಂದು ಇಲ್ಲಿಯ ರಾಜ್ಯ ಸರ್ಕಾರದಿಂದ ಮಂತ್ರಿಗಳು, ಶಾಸಕರುಗಳು ಮತ್ತು ಸಂಸದರು ಹಾಗೂ ಹೋರಾಟಗಾರರ ಒಳಗೊಂಡು, ಕರ್ನಾಟಕ ರಾಜ್ಯ ಸರ್ಕಾರವೂ ಒಂದು ನಿಯೋಗವನ್ನು ತೆಗೆದುಕೊಂಡು ತಮ್ಮ ಸರಕಾರದ ಹಿಂದಿನ ಆರೋಗ್ಯ ಕುಟುಂಬ ಕಲ್ಯಾಣ ಮಂತ್ರಿಗಳಾದ ಮನಸ್ಸೂಕ ಮಾಂಡವಿಯಾ ರವರಿಗೂ ಭೇಟಿ ಮಾಡಲಾಗಿತ್ತು. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ಕೂಡ ಎರಡು ಪತ್ರಗಳನ್ನು ತಮ್ಮ ಆರೋಗ್ಯ ಸಚಿವರಿಗೆ ಬರೆದರು. ಕೇಂದ್ರ ಚುನಾವಣಾಯ ಮುಂಚೆ ಬಜೆಟ್ ಘೋಷಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು, ಒಂದು ಪತ್ರವನ್ನು ಹಿಂದಿನ ಮತ್ತು ಈಗಿನ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮ ರವರಿಗೂ ಪತ್ರ ಬರೆದರು .ಕರ್ನಾಟಕ ರಾಜ್ಯ ಸರಕಾರದ ಇಷ್ಟು ಒತ್ತಡವಿದ್ದರೂ, ತಮ್ಮ ಸರ್ಕಾರದಿಂದ, ಕಡೆಯಿಂದ ನಿರುತ್ಸಾಹ ಯಾಕೆ ?ಮಹತ್ವಾಕಾಂಕ್ಷಿ ಯೋಜನೆಗಳು ಜಿಲ್ಲೆಗೆ ಘೋಷಣೆ ಮಾಡಿದ ನಂತರ ಹಿಂದುಳಿದ ಜಿಲ್ಲೆ ರಾಯಚೂರಿಗೆ ಭಾರತಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೀಡುತ್ತಿಲ್ಲ?. ಪ್ರಧಾನಮಂತ್ರಿ ಜಿ ಅವರೇ ಈ ಬಾರಿ ಕಲ್ಯಾಣ ಕರ್ನಾಟಕದ 5 ಸಂಸದರು ಕಾಂಗ್ರೆಸ್ ನಿಂದ ಆಯ್ಕೆ ಆಗಿದ್ದಾರೆ. ಇದಕ್ಕೆ ಕಾರಣ ಏಮ್ಸ್ (AIIMS) ಹೋರಾಟ ದೀರ್ಘದ ಹೋರಾಟ!. ಇತಿಹಾಸ ನಿರ್ಮಾಣ ಮಾಡಿದ ಹೋರಾಟ.
ದಯವಿಟ್ಟು ಜನರ ಬೇಡಿಕೆಗಳಿಗೆ ತಾವು ಸ್ಪಂದಿಸಲಿಲ್ಲ ಅಂದ್ರೆ ಹೇಗೆ,?ತಾವು ವಿಶೇಷವಾಗಿ ಗಮನಹರಿಸಿ, ನಮ್ಮ ರಾಯಚೂರಿಗೆ ತಕ್ಷಣ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್ (AIIMS)ಘೋಷಣೆ ಮಾಡಿ ಇಲ್ಲದಿದ್ದರೆ, ಕಲ್ಯಾಣ ಕರ್ನಾಟಕದೆಲ್ಲಿ ಪ್ರತಿಭಟನೆ ಚಳುವಳಿಯಾಗುತ್ತವೆ,ಅದಕ್ಕಾಗಿ ಇದಕ್ಕೆಅವಕಾಶ ಮಾಡಿಕೊಡಬೇಡಿ. ಹಾಗಾಗಿ ಆದಷ್ಟು ಬೇಗನೆ ನಮ್ಮ ಈ ಬೇಡಿಕೆಯನ್ನು ಈಡೇರಿಸುವಂತೆ ಎಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅಜ್ಜಪ್ಪ ಕರಡಕಲ್ ರಾಜ್ಯ ಉಪಾಧ್ಯಕ್ಷರು ಮಲ್ಲಿಕಾರ್ಜುನ ಗುಗ್ಗರಿ ಜಿಲ್ಲಾ ಕಾರ್ಯದರ್ಶಿಗಳು ಕೊಪ್ಪಳ, ಕುಷ್ಟಗಿ ತಾಲೂಕ ಅಧ್ಯಕ್ಷರಾದ ಮಾರುತಿ ಎಚ್ ಹಲಗಿ ಈರಪ್ಪ ಬಳಿಗಾರ,ತಾಲೂಕ ಉಪಾಧ್ಯಕ್ಷರು ಗ್ರಾಮ ಘಟಕದ ಅಧ್ಯಕ್ಷರಾದ ಯಮನೂರ ಲಿಂಗದಳ್ಳಿ ರಾಜು ಸುಬೇದಾರ ಯಮನಪ್ಪ ಎಚ್ ದೊಡ್ಡಮನಿ ಮುತ್ತು ಯಲಬುರ್ತಿ ಚಾಂದಪಾಷಾ ಮೆನೇದಾಳ ಬಸವರಾಜ ಬಲಕುಂದಿ ರಾಘವೇಂದ್ರ ಬಜೇಂತ್ರಿ ಹೊನ್ನಪ್ಪ ಭೋವಿ ಯಮನೂರ ಟೈಲರ್ ಅಶೋಕ್ ಮಡಿವಾಳರ ಅಬ್ದುಲ್ ಟೆಂಗುಂಟಿ ಇನ್ನಿತರ ಕಾರ್ಯಕರ್ತರು ಭಾಗಿಯಾಗಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ

WhatsApp Group Join Now
Telegram Group Join Now
Share This Article
error: Content is protected !!