ಕುಷ್ಟಗಿ:-ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಹಾಗೂ ಸರ್ಕಾರ ದೌರ್ಜನ್ಯ ಖಂಡಿಸಿ ಪಟ್ಟಣದ ಕಿತ್ತೂರರಾಣಿ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದಿಂದ ರಾಷ್ಟ್ರೀಯ ಹೆದ್ದಾರಿ-೫೦ ತಡೆದು ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ತಾಲೂಕಾ ಅಧ್ಯಕ್ಷ ಎಸ್ ಜಿ ಪಾಟೀಲ್ ಮಾತನಾಡಿ, ಪಂಚಮಸಾಲಿ ಸಮುದಯಕ್ಕೆ ೨ಎ ಮೀಸಲಾತಿ ನೀಡುವ ವರಗೆ ನಾವೂ ಹೋರಾಟ ಮಾಡೋಣ ಇಷ್ಟು ದಿವಸ ಶ್ರೀಗಳು ಮಾತಿನಂತೆ ಶಾಂತಿಯಿಂದ ಹೋರಾಟ ಮಾಡಿದ್ದು ಸಾಕು, ಮಿಸಲಾತಿ ನೀಡುವವರಗೆ ಕ್ರಾಂತಿಯಿಂದ ಉಗ್ರವಾದ ಹೋರಾಟ ಮಾಡೋಣ ಎಂದರು.
ಪಂಚಮಸಾಲಿ ಸಮುದಾಯದ ಮುಖಂಡ ಸುರೇಶ ಮಂಗಳೂರು ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ೨ ಎ ಮಿಸಲಾತಿ ನೀಡುವಂತೆ ಕೇಳಿದಕ್ಕೆ ನಮ್ಮ ಭಾಂದವರ ಮೇಲೆ ಬೆಳಗಾವಿಯಲ್ಲಿ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯವಾಗಿದೆ. ಸರಕಾರವು ನಮ್ಮನ್ನು ಬಡೆದು ಹತ್ತಿಕ್ಕುವ ಹುನ್ನಾರ ನಡೆದಿದೆ. ನಮ್ಮ ಸಮಾಜದವರೇ ನಮಗೆ ಬೆಂಬಲನೀಡುತ್ತಿಲ್ಲರುವುದು ಖಂಡನೀಯವಾಗಿದೆ. ನಮ್ಮ ಸಮುದಾಯದ ಶಾಸಕರು ಸಹ ಅದರ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಬಸವರಾಜ ಬಳೂಟಗಿ ಮಾತನಾಡಿ, ಇವತ್ತಿನಿಂದ ನಿಜವಾದ ಹೋರಾಟ ಪ್ರಾರಂಭವಾಗಿದೆ. ಪಕ್ಷಭೇದ ಮರೆತು ಹೋರಾಟ ಮಾಡಿ ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿ ನೀಡುವವರೆಗೂ ಹೋರಾಟ ಮಾಡೋಣ ಎಂದರು.
ಜಿ.ಪಂ.ಮಾಜಿ ಸದಸ್ಯ ಕೆ ಮಹೇಶ ಮಾತನಾಡಿ, ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಮಾಡಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಸರಕಾರವು ನಮ್ಮ ಸಮಾಜದ ಸ್ವಾಮಿಗಳಿಗೆ ಕ್ಷೇಮ ಕೇಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಬಸವರಾಜ ಹೊರಪ್ಯಾಟಿ, ಶಿವಪ್ಪ ಗೆಜ್ಜಲಗಟ್ಟಿ, ಸಿದ್ದರಾಮಪ್ಪ ಕೌದಿ, ಚನ್ನಬಸಪ್ಪ ನಾಯಕವಾಡಿ,
ವಕೀಲ ಪ್ರಭು ಸೂಡಿ, ಸಂಗಮೇಶ ಕಂದಗಲ್, ಸುರೇಶ ಕೌದಿ, ಪ್ರಕಾಶ ನಾಯಕವಾಡಿ, ಶಿವು ಸೂಡಿ, ಸತೀಶ್ ಬ್ಯಾಳಿ, ಶಶಿ , ಅಮರೇಶ, ಶಿವು ನಂದಿಹಾಳ ನಿಂಗಪ್ಪ ಜಿಗೇರಿ, ನಾಗರಾಜ ಎಲಿಗಾರ, ಅಮರೇಗೌಡ ಪಾಟೀಲ್ ವಕೀಲರು, ಶರಣಗೌಡ ಪಾಟೀಲ್, ಸಂತೋಷ ಕಂಚಿ, ಮುತ್ತಣ್ಣ ಎಲಿಗಾರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ