ಗಂಗಾವತಿ: ತಾಲೂಕಿನ ಮರಳಿ ಗ್ರಾಮದ ಹತ್ತಿರವಿರುವ ರುದ್ರೇಶ್ ನಗರದಲ್ಲಿ ಎಂ.ಎಸ್.ಎಂ.ಎಸ್. ಕಾಲೇಜ್ ಆವರಣದಲ್ಲಿ ಇರುವ 63 ಶಿಲಾ ಕಂಬಗಳ ದೇವಸ್ಥಾನದಲ್ಲಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಹತ್ತನೇ ವರ್ಷದ ಪುಣ್ಯ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹರಳಹಳ್ಳಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ಉದ್ಘಾಟಿಸಿದರು.
ನಂತರ ಎಂ.ಎಸ್.ಎಂ.ಎಸ್. ಗ್ರೂಪ್ ಅಧ್ಯಕ್ಷರಾದ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಎಂ.ಸಿದ್ದರಾಮಯ್ಯ ಸ್ವಾಮಿ ಮಾತನಾಡಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗಂಗಾವತಿಯಿಂದ ರುದ್ರೇಶ್ವರ ನಗರಕ್ಕೆ 1994/95 ರಲ್ಲಿ ಬಂದು ಈ ಭಾಗದ 38 ಹಳ್ಳಿಗಳಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ, ಅಕ್ಷರ ದಾಸೋಹ, ಅನ್ನದಾಸೋಹ ಮುಖಾಂತರ ಶಿಕ್ಷಣ ವಿದ್ಯಾಲಯವನ್ನು ಸ್ಥಾಪಿಸಿದರು. ಎಂ.ಎಸ್.ಎಂ.ಎಸ್. ವಿದ್ಯಾಲಯದಲ್ಲಿ ಪಿಯುಸಿ, ಶಿಕ್ಷಣ (ಬಿ.ಇಡಿ.),ಪದವಿ, ತಾಂತ್ರಿಕ ಶಿಕ್ಷಣ, ಹೀಗೆ ಶಿಕ್ಷಣವನ್ನು ಮುಂದುವರಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಿದವರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು. ಈಗಾಗಲೇ ಶಿಕ್ಷಣ ಸಂಸ್ಥೆಯಲ್ಲಿ 12 ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯನ್ನು ಕಾಣುತ್ತಿದ್ದಾರೆ. ಪೂಜ್ಯರು ರಾಜ್ಯಾದ್ಯಂತ ಈಗಾಗಲೇ ಎಂಟು ಮಠಗಳನ್ನು ಕಟ್ಟಿ ಹೋಗಿದ್ದಾರೆ, ಅವರು ಸಾವಯವ ಕೃಷಿ ಅಧ್ಯಯನದ ಕುರಿತು ಕೃಷಿಜ್ಞಾನ ಪ್ರದೀಪಿಕೆ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.
ರಾಜ್ಯ ಸರ್ಕಾರ 40,000 ಪುಸ್ತಕಗಳನ್ನು ಖರೀದಿ ಮಾಡಿದ್ದು, ಕೃಷಿ ಮೇಲೆ ಇರುವ ಅವರ ಕಾಳಜಿಯನ್ನು ಇದು ಎತ್ತಿ ತೋರಿಸುತ್ತದೆ. ಶಿಕ್ಷಣದಲ್ಲಿ ಅವರ ಕನಸಿನ ಯೋಜನೆ ಇಂದು ಸಾಕಾರ ಗೊಂಡಿದೆ ಎಂದು ಎಂ.ಎಸ್.ಎಂ.ಎಸ್. ಗ್ರೂಪ್ ಅಧ್ಯಕ್ಷ ಬಿಜೆಪಿ ಹಿರಿಯ ಮುಖಂಡ ಎಚ್.ಎಂ. ಸಿದ್ದರಾಮಯ್ಯ ಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಮಹಾದೇವಸ್ವಾಮಿ, ಕಾಲೇಜ್ ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಜಿಲಾನಿ, ಮುಖ್ಯೋಪಾಧ್ಯಾ ಯರಾದ ಮೌನೇಶ್, ಶರಣಪ್ಪ, ಮ್ಯಾನೇಜ್ಮೆಂಟ್ ಕಮಿಟಿ ಸಿ.ಇ.ಓ. ವಿರುಪಾಕ್ಷಯ್ಯ ಸ್ವಾಮಿ, ಪಂಚಾಕ್ಷರಯ್ಯ ಸ್ವಾಮಿ, ಶ್ರೀಮತಿ ಪಾರ್ವತಿ ಸಿದ್ದರಾಮಯ್ಯ ಸ್ವಾಮಿ, ಶ್ರೀಮತಿ ಯಶೋಧ ಹಾಗೂ ಚನ್ನ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಭಕ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..