ನವಿಲಕಲ್ ಶ್ರೀ ಶಾಂಭವಿ ಬೃಹನ್ ಮಠದಲ್ಲಿ ಪತ್ರಿಕಾ ದಿನಾಚರಣೆ.. ಅಭಿನವ ಶ್ರೀಗಳಿಂದ ಸಸಿಗೆ ನೀರು ಹಾಕುವ ಮೂಲಕ ಚಾಲನೆ

Gadi Kannadiga
ನವಿಲಕಲ್ ಶ್ರೀ ಶಾಂಭವಿ ಬೃಹನ್ ಮಠದಲ್ಲಿ ಪತ್ರಿಕಾ ದಿನಾಚರಣೆ.. ಅಭಿನವ ಶ್ರೀಗಳಿಂದ ಸಸಿಗೆ ನೀರು ಹಾಕುವ ಮೂಲಕ ಚಾಲನೆ
WhatsApp Group Join Now

ಸಿರವಾರ:-ತಾಲೂಕಿನ ಸಮೀಪದ ನವಿಲಕಲ್ ಗ್ರಾಮದ ನಮ್ಮ ಭಾಗದ ನಡೆದಾಡುವ ದೇವರು ಶ್ರೀ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಸಸಿಗೆ ನೀರೆರೆಯುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೂಜ್ಯ ಅಭಿನವ ಶ್ರೀಗಳು ಮಾತನಾಡಿ . ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವುದರ ಜೊತೆಗೆ ಪತ್ರಿಕೋದ್ಯಮದ ಸಾಮಾಜಿಕ ಜವಾಬ್ದಾರಿಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.

ಜೊತೆಗೆ ಪತ್ರಿಕಾ ಮಾಧ್ಯಮ ಮಿತ್ರರು ಎಲ್ಲರೂ ಸೇರಿ ಪರಿಸರಕ್ಕೆ ತಾವೆಲ್ಲರೂ ತಮ್ಮ ಮನೆಯ ಸುತ್ತಮುತ್ತ ಹಾಗೂ ಗ್ರಾಮದಲ್ಲಿ ಸಸಿ ನೆಡುವುದರ ಮುಖಾಂತರ ಪರಿಸರದ ಕಡೆ ಕಾಳಜಿ ವಹಿಸಿ ಎಂದರು.

 

ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಿದೆ. ಸತ್ಯವನ್ನು ನಿರ್ಭೀತಿಯಿಂದ ಜನರಿಗೆ ತಲುಪಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದು. ಇಂದಿನ ದಿನಗಳಲ್ಲಿ ಸುದ್ಧಿಯ ಜೊತೆಗೆ ಪರಿಸರ ಕಾಳಜಿಯೂ ಅಷ್ಟೇ ಮುಖ್ಯವಾಗಿದೆ ಎಂಬುದನ್ನು ಈ ಸಸಿ ನೆಡುವ ಕಾರ್ಯಕ್ರಮದ ಮೂಲಕ ನೆನಪಿಸಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ವಿರುಪಾಕ್ಷಿ ಗೌಡ ಮರಾಠ ಉಪಾಧ್ಯಕ್ಷರಾದ ಮಹೆಬೂಬ್ ಮಾಚನೂರ್ ಅರುಣ್ ಕುಮಾರ್ ಹೂಗಾರ್ ನವಿಲಕಲ್ ಶ್ರೀಮಠದ ಕಾರ್ಯದರ್ಶಿಗಳು ಖಜಾಂಚಿ ಇದಾಯಿತ್ ಪಾಷಾ ದೊಡ್ಡಮನಿ ಅನಿಲ್ ಕುಮಾರ್ ಶಾಕಪುರ್ ನಾಗೇಶ್ ನಾಯಕ, ದೇವಪ್ಪ ನಾಯಕ್, ಹಾಗೂ ಶ್ರೀಮಠದ ಶಿಷ್ಯವೃಂದ ಮತ್ತು ಸ್ಥಳೀಯ ಗಣ್ಯರು ಭಾಗವಹಿಸಿದ್ದರು.

 

ಆರ್ ಶರಣಪ್ಪ ಗುಮಗೇರಾ

WhatsApp Group Join Now
Telegram Group Join Now
Share This Article
error: Content is protected !!