ತಗ್ಗು ಗುಂಡಿಗಳಿಗೆ ಜಲ್ಲಿಕಲ್ಲು ಮತ್ತು ಮರಂ‌ಹಾಕಿ‌ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು

Gadi Kannadiga
ತಗ್ಗು ಗುಂಡಿಗಳಿಗೆ ಜಲ್ಲಿಕಲ್ಲು ಮತ್ತು ಮರಂ‌ಹಾಕಿ‌ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು
WhatsApp Group Join Now

ಕುಷ್ಟಗಿ:-ಪಟ್ಟಣದಿಂದ ತಾವರಗೇರಾ ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ತಗ್ಗು ಬಿದ್ದಿರುವ ಸ್ಥಳಗಳಲ್ಲಿನ ಪೋಟೋಗಳನ್ನು ಎಇಇ ಸುಧಾಕರ ಕಾತರಕಿ ರವರಿಗೆ ಪತ್ರಿಕಾ ಮಾದ್ಯಮದವರು ವಾಟ್ಸಪ್ ಮೂಲಕ ಪೋಟೋಗಳನ್ನು ಕಳಿಸಿಕೊಡಲಾಗಿತ್ತು.ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಜಲ್ಲಿಕಲ್ಲು ಮತ್ತು ಮರಂ ಹಾಕಿ ರಿಪೇರಿ‌ ಮಾಡಲಾಯಿತು.

ಕುಷ್ಟಗಿ ಯಿಂದ ತಾವರಗೇರಾ,ಸಿಂಧನೂರು,ಲಿಂಗಸೂರು,ಗಂಗಾವತಿ ಸೇರಿದಂತೆ ನಾನಾ ಕಡೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿರುವುದರಿಂದ ಪ್ರತಿ ನಿತ್ಯ ನೂರಾರು ಸಾರಿಗೆ ಬಸ್ , ಖಾಸಗಿ ವಾಹನಗಳು , ಕಾರ್, ಜೀಪು, ಟಂಟಂ, ಟಾಟಾ ಎಸಿ,ಬೈಕ್ , ಲಾರಿಗಳು ಸೇರಿದಂತೆ ಇನ್ನಿತರ ವಾಹನಗಳು ಓಡಾಡುತ್ತಿರುತ್ತೇವೆ. ಕುಷ್ಟಗಿ ಯಿಂದ ಸ್ವಲ್ಪ ದೂರದಲ್ಲಿರುವ ರೈಲ್ವೆ ಬ್ರೀಜ್ ಕೆಳಗಡೆ ಮತ್ತು ಇತರೆ ಕಡೆ ರಸ್ತೆಯ ಮಧ್ಯಭಾಗದಲ್ಲಿ ಅಲ್ಲಲ್ಲಿ ತಗ್ಗು , ಗುಂಡಿಗಳು ಬಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತದ್ದವು.‌ ವೇಗವಾಗಿ ಓಡಾಡುವ ವಾಹನಗಳು ತಗ್ಗು, ಗುಂಡಿಗಳು ಬರುತ್ತಿದ್ದಂತೆ ಚಾಲಕ ವಾಹನಗಳನ್ನು ನಿಯಂತ್ರಣ ತಪ್ಪಿಸಲು ಕಸರತ್ತು ಮಾಡಬೇಕಿತ್ತು. ಸ್ವಲ್ಪ ಜಾಗೃತಿ ತಪ್ಪಿದರೆ ಅನಾಹುತಗಳು ಆಗುವ ಸಂಭವಿಸುತ್ತಿದ್ದವು.‌
ಲೋಕಪಯೋಗಿ ಇಲಾಖೆಯವರು ಕಾಳಜಿ ವಹಿಸಿ ತಗ್ಗು, ಗುಂಡಿಗಳು ಬಿದ್ದ ಜಾಗದಲ್ಲಿ ಬುಧುವಾರ ಜಲ್ಲಿಕಲ್ಲು ಮತ್ತು ಮರಂ ಹಾಕಿ ರಿಪೇರಿ ಮಾಡಿದರು. ಲೋಕಪಯೋಗಿ ಇಲಾಖೆಯಯವರು ರಸ್ತೆ ರಿಪೇರಿ ಮಾಡಿರುವದರಿಂದ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ

WhatsApp Group Join Now
Telegram Group Join Now
Share This Article
error: Content is protected !!